More

    ಗೊರಿಲ್ಲಾಗಳಿಗೂ ಕರೋನಾ? ಅಮೆರಿಕಾದ ಜೂನಲ್ಲಿ ನಡೆದದ್ದೇನು?

    ಕಾಲಿಫೋರ್ನಿಯಾ: ಮನುಷ್ಯರಿಗೆ ಅತಿಹತ್ತಿರವಾದ ಪ್ರಾಣಿಪ್ರಬೇಧವಾದ ಗೊರಿಲ್ಲಾಗಳಲ್ಲಿ ಕರೋನಾ ಕಾಣಿಸಿಕೊಂಡಿದ್ದು, ಅವು ಈ ಖಾಯಿಲೆಯನ್ನು ಹೇಗೆ ಎದುರಿಸುತ್ತವೆ ಎಂದು ಪ್ರಾಣಿವೈದ್ಯರು ಅಧ್ಯಯನ ನಡೆಸುತ್ತಿದ್ದಾರೆ.

    ಅಮೆರಿಕಾದ ಕಾಲಿಫೋರ್ನಿಯಾ ಪ್ರಾಂತ್ಯದ ಸಾನ್ ಡಿಯಾಗೋ ಜೂ ಸಫಾರಿ ಪಾರ್ಕಿನ ಎಂಟು ಗೊರಿಲ್ಲಾಗಳಲ್ಲಿ ಕರೋನಾ ಸೋಂಕು ಕಂಡುಬಂದಿದೆ. ಕರೋನಾ ಪಾಸಿಟೀವ್ ಆದ ಪಾರ್ಕಿನ ಸಿಬ್ಬಂದಿಯೊಬ್ಬನಿಂದ ಈ ಪ್ರಾಣಿಗಳಿಗೆ ಸೋಂಕು ಹರಡಿದೆ ಎಂದು ಸಾನ್ ಡಿಯಾಗೋ ಪಾರ್ಕಿನ ನಿರ್ದೇಶಕಿ ಲೀಸಾ ಪೀಟರ್ಸನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಸಚಿವರ ಅಳಿಯನ ಹೆಸರು; ವಿಚಾರಣೆ ನಡೆಸಿದ ಎನ್​ಸಿಬಿ ಅಧಿಕಾರಿಗಳು

    ಸೋಂಕು ಹರಡಲು ಕಾರಣನಾದ ಎನ್ನಲಾದ ಉದ್ಯೋಗಿಯು ಸದಾ ಕಾಲ ಮಾಸ್ಕ್ ಧರಿಸಿಯೇ ಕೆಲಸ ಮಾಡುತ್ತಿದ್ದ. ಆದಾಗ್ಯೂ ಗೊರಿಲ್ಲಾಗಳಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

    ಡಿಸೆಂಬರ್ 6 ನಿಂದಲೇ ಸಾರ್ವಜನಿಕ ವೀಕ್ಷಣೆಗೆ ಮುಚ್ಚಿರುವ ಪಾರ್ಕಲ್ಲಿ ಪ್ರಾಣಿವೈದ್ಯರು ಸೋಂಕಿತ ಗೊರಿಲ್ಲಾಗಳನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಿದ್ದಾರೆ. ಅವುಗಳಿಗೆ ವಿಟಮಿನ್​ ಮತ್ತು ದ್ರವಗಳೊಂದಿಗೆ ಉತ್ತಮ ಆಹಾರ ನೀಡುತ್ತಿದ್ದು, ಯಾವುದೇ ನಿರ್ದಿಷ್ಟ ಚಿಕಿತ್ಸೆ ನೀಡುತ್ತಿಲ್ಲ ಎಂದಿದ್ದಾರೆ. ಸ್ವಲ್ಪ ಮೂಗು ಕಟ್ಟುವುದು ಮತ್ತು ಕೆಮ್ಮುವುದು ಬಿಟ್ಟರೆ, ಗೊರಿಲ್ಲಾಗಳು ಚೆನ್ನಾಗೇ ಇವೆ ಎಂದು ಲೀಸಾ ತಿಳಿಸಿದ್ದಾರೆ.

    ಈ ದೊಡ್ಡ ಗಾತ್ರದ ಪ್ರಾಣಿಗಳಲ್ಲಿ ಸೋಂಕು ಮೊದಲ ಬಾರಿ ಪತ್ತೆಯಾಗಿದ್ದು, ಅವುಗಳ ದೇಹ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ತಿಳಿದಿಲ್ಲ. ಶೇ.98.4 ರಷ್ಟು ವಂಶವಾಹಿನಿಗಳನ್ನು ಮನುಷ್ಯರಂತೆಯೇ ಹೊಂದಿರುವ ಗೊರಿಲ್ಲಾಗಳು, ಸಮಾಜಜೀವಿಗಳು, ಗುಂಪಿನಲ್ಲೇ ಬದುಕುವಂಥವು. ಆದ್ದರಿಂದ ಅವುಗಳನ್ನು ಪ್ರತ್ಯೇಕಗೊಳಿಸಿಲ್ಲ ಎಂದು ಪೀಟರ್ಸನ್ ತಿಳಿಸಿದ್ದಾರೆ.

    ಇದನ್ನೂ ಓದಿ: ಸಚಿವ ರೇಪ್​ ಮಾಡಿದ್ದಾನೆ ಎಂದ ಗಾಯಕಿ: ಇದು ಅತ್ಯಾಚಾರವಲ್ಲ, ನಮಗೆ ಇಬ್ರು ಮಕ್ಕಳಿದ್ದಾರೆ ಎಂದ ನ್ಯಾಯಮಂತ್ರಿ!

    ಜನವರಿ 6 ರಂದು ಎರಡು ಗೊರಿಲ್ಲಾಗಳು ಕೆಮ್ಮಲು ಆರಂಭಿಸಿದಾಗ ಅವುಗಳ ಮಲವನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅಮೇರಿಕದ ಕೃಷಿ ರಾಷ್ಟ್ರೀಯ ಪಶುವೈದ್ಯಕೀಯ ಸೇವಾ ಪ್ರಯೋಗಾಲಯವು ಮೂರು ಗೊರಿಲ್ಲಾಗಳಲ್ಲಿ ಕರೋನಾ ಸೋಂಕನ್ನು ದೃಢಪಡಿಸಿತು. ತದನಂತರ ಪಾರ್ಕಿನಲ್ಲಿ ಒಟ್ಟಿಗೆ ಇರುವ ಎಂಟು ಗೊರಿಲ್ಲಾಗಳ ಮಲವನ್ನೂ ಪರೀಕ್ಷೆಗೆ ಕಳಿಸಲಾಗಿದೆ.

    ರೋಗದ ಲಕ್ಷಣಗಳು ಹೆಚ್ಚಾದಲ್ಲಿ ನೀಡಬೇಕಾದ ಚಿಕಿತ್ಸೆ ಬಗ್ಗೆ ಪಾರ್ಕಿನ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ವನ್ಯಪ್ರಾಣಿಗಳಿಗೆ ಅವರದ್ದೇ ಆದ ರೋಗನಿರೋಧಕ ಶಕ್ತಿ ಇರುತ್ತದೆ. ನಮಗಿಂತ ಭಿನ್ನವಾಗಿ ಗುಣಮುಖರಾಗಬಹುದು ಎಂದು ಪೀಟರ್ಸನ್ ಹೇಳಿದ್ದಾರೆ.

    ಪಾರ್ಕಿನ ಸಿಬ್ಬಂದಿಗಳಿಗೆ ಪ್ರಾಣಿಗಳೊಂದಿಗೆ ಕೆಲಸ ಮಾಡುವಾಗ ಫೇಸ್ ಶೀಲ್ಡ್ ಮತ್ತು ಗಾಗಲ್ಸ್ಅನ್ನು ಕಡ್ಡಾಯ ಮಾಡುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.

    ಗೊರಿಲ್ಲಾಗಳ ಸಂಖ್ಯೆಯು ಕಳೆದ ಎರಡು ದಶಕಗಳಲ್ಲಿ ಶೇ.60 ರಷ್ಟು ಕಡಿಮೆಯಾಗಿದ್ದು, ಈ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಕರೊನಾ ಬಂದಿರುವ ಬಗ್ಗೆ ಪ್ರಾಣಿಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

    ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts