

50 Rupee note : ಅದೃಷ್ಟ ಯಾವಾಗ? ಯಾರನ್ನು? ಹುಡುಕಿಕೊಂಡು ಬರುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಸೂರ್ಯ ಹುಟ್ಟಿ ಮುಳುಗುವ ಹೊತ್ತಿಗೆ ಅಥವಾ ಸೂರ್ಯ ಮುಳುಗಿ ಉದಯಿಸುವ ಹೊತ್ತಿಗೆ ಕೂಲಿ ಮಾಡುವವನು ಕೂಡ ಕೋಟ್ಯಾಧಿಪತಿಯಾಗಬಹುದು. ಅದೃಷ್ಟ ದೇವತೆ ಯಾವ ರೂಪದಲ್ಲಾದರೂ ಭೇಟಿ ಮಾಡಲು ಬರಬಹುದು. ಆಗಾಗ ನಿಮ್ಮ ಜೇಬು ಪರಿಶೀಲಿಸುವುದು ಸಹ ಒಳ್ಳೆಯದು. ಏಕೆಂದರೆ, ಕೆಲವೊಮ್ಮೆ, ಕೇವಲ ಐವತ್ತು ರೂಪಾಯಿ ನೋಟು ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡಬಹುದು.
ಐವತ್ತು ರೂಪಾಯಿ ನೋಟುಗಳು ನಿಮ್ಮ ಕೈಯಲ್ಲಿ ಇದ್ರೆ ನೀವು ಶ್ರೀಮಂತರಾಗುವ ಕನಸು ಕಾಣಬಹುದು. ಏಕೆಂದರೆ, ಕೆಲವು ವೈಶಿಷ್ಟ್ಯಗಳನ್ನು ಹೊಂದಿರುವ ನೋಟುಗಳಿಗೆ ಹಣ ಸಿಗುತ್ತದೆ. ಇಂತಹ ಭರವಸೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿಲ್ಲ. ಆದರೆ, ಕೆಲ ವೈಶಿಷ್ಟ್ಯಗಳನ್ನು ಹೊಂದಿರುವ ಕರೆನ್ಸಿಗಳ ಮೇಲೆ ತುಂಬಾ ಆಸಕ್ತಿ ಹೊಂದಿರುವ ಕೆಲವರು ಈ ಭರವಸೆಯನ್ನು ನೀಡಿದ್ದಾರೆ. ಕೆಲ ಹಳೆಯ ವಸ್ತುಳಿಗೆ ಹಾಗೂ ವಿಶೇಷ ವಸ್ತುಗಳಿಗೆ ಈ ಆಧುನಿಕ ಜಗತ್ತಿನಲ್ಲಿ ತುಂಬಾ ಬೇಡಿಕೆ ಇದೆ. ಅದರಲ್ಲೂ ಹಳೆಯ ನೋಟುಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ. ನಮ್ಮಲ್ಲಿರುವ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಖರೀದಿಸಲೆಂದೇ ಕೆಲವು ವೆಬ್‌ಸೈಟ್‌ಗಳಿವೆ. ಅವುಗಳಲ್ಲಿ ಹಳೆಯ ನಾಣ್ಯ ಮತ್ತು ನೋಟನ್ನು ಮಾರಿ ಹಣ ಪಡೆಯಬಹುದು. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.
ಒಬ್ಬ ವ್ಯಕ್ತಿ ಅಂಗಡಿಗೆ ಹೋಗಿ 50 ರೂಪಾಯಿ ನೋಟು ಕೊಟ್ಟರೆ, ಅವರಿಗೆ 50 ರೂಪಾಯಿ ಮೌಲ್ಯದ ಉತ್ಪನ್ನ ಮಾತ್ರ ಸಿಗುತ್ತದೆ. ಆದಾಗ್ಯೂ, ಇಂಡಿಯಾ ಮಾರ್ಟ್, ಕಾಯಿನ್ ಬಜಾರ್, ಕ್ವಿಕರ್, Pinterest, eBay ಮತ್ತು OLXನಂತಹ ಕೆಲವು ಅಪ್ಲಿಕೇಶನ್‌ಗಳಲ್ಲಿ ಕೆಲವು ವೈಶಿಷ್ಟ್ಯಗಳು ಇರುವ ನೋಟುಗಳನ್ನು ಅಥವಾ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಣವನ್ನು ಗಳಿಸಬಹುದು.
50 ರೂ. ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರದ ಜೊತೆಗೆ 786 ಸಂಖ್ಯೆ ಇರಬೇಕು. ನಿಮ್ಮಲ್ಲಿ ಅಂತಹ ನೋಟುಗಳಿದ್ದರೆ, ಈ ಮೇಲಿನ ವೆಬ್ಸೈಟ್ಗಳನ್ನು ತೆರೆದು, ನೀವು ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ನೋಟಿನ ಎರಡೂ ಬದಿಯ ಫೋಟೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನೀಡಿದರೆ, ಹೇಳಿದ ಕರೆನ್ಸಿ ನೋಟು ಅಗತ್ಯವಿರುವವರು ನಿಮ್ಮನ್ನು ಸಂಪರ್ಕಿಸಿ, ಹಣ ಕೊಟ್ಟು ಖರೀದಿ ಮಾಡುತ್ತಾರೆ.
ಆದಾಗ್ಯೂ, ಇಂತಹ ವಹಿವಾಟುಗಳನ್ನು ರಿಸರ್ವ್ ಬ್ಯಾಂಕ್ ಅನುಮೋದಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ಅಂತಹ ಕರೆನ್ಸಿಗಳನ್ನು ಹರಾಜು ಮಾಡುವಾಗ ಅಥವಾ ಮಾರಾಟ ಮಾಡುವಾಗ ಯಾವುದೇ ವಂಚನೆ ಸಂಭವಿಸಿದಲ್ಲಿ, ಅದು ಮಾರಾಟಗಾರರ ಸಂಪೂರ್ಣ ಜವಾಬ್ದಾರಿಯಾಗಿದೆ. ವಿಶ್ವಾಸಾರ್ಹ ವೇದಿಕೆಯನ್ನು ಮಾತ್ರ ಆರಿಸಿಕೊಳ್ಳಿ. ಇಂತಹ ವಿಷಯಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾತ್ರ ನಿರ್ವಹಿಸಬಹುದು. (ಏಜೆನ್ಸೀಸ್)