ಪ್ರೇಮಿಗಳ ದಿನಕ್ಕೆ ತಾಜ್​ ಹೋಟೆಲ್​ ಸ್ಪೆಷಲ್​ ಗಿಫ್ಟ್​? ಪ್ರೇಮಿಗಳಿಗೆ ವಾರದ ಕಾಲ ಫ್ರೀ ರೂಂ!?

taj
Published on

ಮುಂಬೈ: ಇನ್ನೇನು ಪ್ರೇಮಿಗಳ ದಿನಕ್ಕೆ ಕೆಲವೇ ಕೆಲ ದಿನಗಳು ಬಾಕಿಯುಳಿದಿವೆ. ಈ ಸಂದರ್ಭದಲ್ಲಿ ತಾಜ್ ಹೋಟೆಲ್​ ವಿಶೇಷ ಆಫರ್​ ಒಂದನ್ನು ನೀಡುತ್ತಿರುವ ಸಂದೇಶಗಳು ಹರಿದಾಡಿವೆ. ಲಕ್ಕಿ ಕಪಲ್​ಗೆ ತಾಜ್​ ಹೋಟೆಲ್​ನಲ್ಲಿ ವಾರದ ಕಾಲ ಉಚಿತವಾಗಿ ಉಳಿಯುವ ಅವಕಾಶವಿದೆ ಎನ್ನುವ ಸಂದೇಶ ಹರಿದಾಡಿದೆ. ಈ ಸಂದೇಶ ಸತ್ಯವೇ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

"ನಾನು ತಾಜ್​ ಹೋಟೆಲ್​ನಲ್ಲಿ ಜ7 ದಿನ ಉಚಿತವಾಗಿ ಇರುವ ಕೂಪನ್​ ಗೆದ್ದಿದ್ದೇನೆ." ಎನ್ನುವ ಸಂದೇಶ ವಾಟ್ಸ್​ಆ್ಯಪ್​ ತುಂಬ ಹರಿದಾಡಿದೆ. ಅದರ ಜತೆ ಒಂದು ಲಿಂಕ್​ ಕೂಡ ಇದ್ದು, ಅದನ್ನು ಕ್ಲಿಕ್​ ಮಾಡಿದರೆ ನಿಮಗೆ ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ 200 ಗಿಫ್ಟ್​ ಕಾರ್ಡ್​ಗಳಿದ್ದು, ಒಂದರಲ್ಲಿ ಈ ಫ್ರೀ ರೂಂ ಸೇವೆಯ ಕೂಪನ್​ ಇದೆ. ನಿಮಗೆ ಮೂರು ಚಾನ್ಸ್​ ನೀಡಲಾಗುವುದು, ನೀವು ಈ ಚಾನ್ಸ್​ ಗಳಲ್ಲಿ ಫ್ರೀ ರೂಂ ಸೇವೆಯ ಕೂಪನ್​ ತೆರೆದರೆ ನಿಮಗೆ ಆ ಸೇವೆ ಲಭ್ಯವಾಗುವುದು. ಅದಕ್ಕೆ ಮೊದಲು ನೀವು ಆ ಸಂದೇಶವನ್ನು 20 ಜನರಿಗೆ ಅಥವಾ ಐದು ವಾಟ್ಸ್​ಆ್ಯಪ್​ ಗ್ರೂಪುಗಳಿಗೆ ಕಳುಹಿಸಬೇಕು.

ಈ ರೀತಿಯ ಆಫರ್​ ಒಂದು ವೈರಲ್​ ಆಗುತ್ತಿದ್ದಂತೆಯೇ ತಾಜ್​ ಹೋಟೆಲ್​ ಈ ಬಗ್ಗೆ ಮಾತನಾಡಿದೆ. ಯಾವುದೋ ಒಂದು ನಕಲಿ ವೆಬ್​ಸೈಟ್​ ಈ ರೀತಿಯ ಸುಳ್ಳು ಸುದ್ದಿ ಹರಿಬಿಟ್ಟಿದೆ. ನಮ್ಮಲ್ಲಿ ಆ ರೀತಿಯ ಯಾವುದೇ ಆಫರ್​ನ್ನು ಕೊಡಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ವ್ಯಾಲಟೈಂನ್ಸ್​ ಡೇಗೆ ತಾಜ್​ ಹೋಟೆಲ್​ನಲ್ಲಿ ನಿಮ್ಮ ಜೋಡಿಯ ಜತೆ ಇರೋದಕ್ಕೆ ಫ್ರೀ ವ್ಯವಸ್ಥೆ ಆಯ್ತು ಎಂದು ಬೀಗಿದ್ದವರಿಗೆ ಇದು ನಿರಾಸೆ ತಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net