More

    ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

    ಚೆನ್ನೈ: ತಮ್ಮ ಮದುವೆಯನ್ನು ಎಲ್ಲರೂ ಸದಾ ನೆನಪಿಟ್ಟುಕೊಳ್ಳಬೇಕು ಎನ್ನುವ ಕಾರಣದಿಂದ ಚೆನ್ನೈನ ಜೋಡಿಯೊಂದು ನೀರಿನಾಳಕ್ಕೆ ಹೋಗಿ ವಿಶೇಷ ರೀತಿಯಲ್ಲಿ ಮದುವೆಯಾಗಿದ್ದಾರೆ.

    ವಿದೇಶಗಳಲ್ಲಿ ಕೆಲವು ಜೋಡಿಗಳು ಆಕಾಶದ ಮೇಲೆ, ಸರ್ಕಸ್​ ಮಾಡುತ್ತಾ, ಸ್ಕೂಬಾ ಡೈವಿಂಗ್​ ಮೂಲಕ ಮದುವೆಯಾಗಿದ್ದು ವರದಿಯಾಗಿವೆ. ಆದರೆ ಚೆನ್ನೈನ ಜೋಡಿ ಕೂಡ ಇಂಥದ್ದೊಂದು ಸಾಹಸಕ್ಕೆ ಕೈಹಾಕಿ ಮದುವೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

    ಸುಮಾರು 60 ಅಡಿಯಷ್ಟು ನೀರಿನ ಆಳಕ್ಕೆ ಹೋಗಿ ಈ ಜೋಡಿ ಮದುವೆಯಾಗಿದೆ. ಅಂದ ಹಾಗೆ ಈ ಜೋಡಿಯ ಹೆಸರು ವಿ ಚಿನ್ನದುರೈ ಮತ್ತು ಎಸ್ ಶ್ವೇತಾ. ಫೆಬ್ರುವರಿ 1ರಂದು ಬೆಳಗ್ಗೆ ಈ ಮದುವೆ ನೀರಿನ ಆಳದಲ್ಲಿ ನಡೆದಿದೆ. ನೂತನ ವಧು-ವರರನ್ನು ಆಶೀರ್ವದಿಸಲು ಎಲ್ಲರೂ ನೀರಿನೊಳಕ್ಕೆ ಇಳಿಯಿರಪ್ಪಾ… ಎಂದು ತಮಾಷೆಯಾಗಿ ಅಲ್ಲಿ ಸೇರಿರುವ ಜನರು ಆಡಿಕೊಂಡಿದ್ದಾರೆ.

    ನಮ್ಮದು ಸಾಂಪ್ರದಾಯಿಕ ವಿವಾಹ ಸಮಾರಂಭವಾಗಿತ್ತು, ಅದು ನೀರೊಳಗಿತ್ತು. ಶುಭ ಮುಹೂರ್ತದಲ್ಲಿ ಬೆಳಗ್ಗೆ ನೀರಿನೊಳಕ್ಕೆ ಧುಮುಕಿದರು ಮತ್ತು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡೆವು ಮತ್ತು ನಮ್ಮ ಪಾದ್ರಿಯ ಸೂಚನೆಯಂತೆ ಬೆಳಗ್ಗೆ 7.30ರ ತಾಳಿ ಕಟ್ಟಲಾಗಿದೆ” ಎಂದು ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಚಿನ್ನದುರೈ ಹೇಳಿದರು. ಇವರು ಸ್ಕೂಬಾ ಡೈವಿಂಗ್​ ಎಕ್ಸ್​ಪರ್ಟ್​ ಕೂಡ ಹೌದು.

    ನೀರಿನೊಳಗೆ ಮದುವೆಯೆಂದರೆ ನನಗೆ ಮೊದಲು ಬಹಳ ಹೆದರಿಕೆಯಾಗಿತ್ತು ಎಂದು ವಧು ಶ್ವೇತಾ ಅನುಭವ ಹಂಚಿಕೊಂಡಿದ್ದಾರೆ. ಇವರು ಕೂಡ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದಾರೆ. ನಾನು ಇದಕ್ಕಾಗಿ ಸ್ಕೂಬಾ ಡೈವಿಂಗ್​ ಕೋರ್ಸ್​ ಮಾಡಿದೆ. ನನ್ನಂತೆ ನನ್ನ ಅಪ್ಪ-ಅಮ್ಮ ಕೂಡ ತುಂಬಾ ಹೆದರಿಕೊಂಡಿದ್ದರು. ನಮ್ಮೊಂದಿಗೆ ಎಂಟು ಡೈವರ್‌ಗಳು ಇದ್ದರು. ಮದುವೆ ತುಂಬಾ ರೋಮಾಂಚನಕಾರಿಯಾಗಿ ನಡೆಯಿತು ಎಂದು ಶ್ವೇತಾ ಹೇಳಿದ್ದಾರೆ.

    ಇಬ್ಬರೂ ಸಾಂಪ್ರದಾಯಿಕ ವಿವಾಹದ ಉಡುಪಿನಲ್ಲಿ ನೀರಿನಲ್ಲಿ ಧುಮುಕಿದರು. ವಿವಾಹ ಸಮಾರಂಭವನ್ನು ವಿಡಿಯೋ ಗ್ರಾಫ್ ಮಾಡಲಾಗಿದೆ. ವಧು-ವರರು ಸಮುದ್ರದಿಂದ ಹೊರಬರುತ್ತಿದ್ದಂತೆ, ಕುಟುಂಬದವರು ಸ್ವಾಗತಿಸಿ ಮುಂದಿನ ವಿಧಿ ವಿಧಾನ ನೆರವೇರಿಸಿದರು. ಇದರ ವಿಡಿಯೋ ಇದೀಗ ವೈರಲ್​ ಆಗಿದೆ.

    ವಿಡಿಯೋ ಇಲ್ಲಿದೆ ನೋಡಿ: watch on facebook ಮೇಲೆ ಕ್ಲಿಕ್ಕಿಸಿ:

    ಹೊಟ್ಟೆತುಂಬಾ ಉಂಡು ಕೂಲ್​ ಕೂಲ್​ ಆಗ್ರಪ್ಪಾ… ಸಿಎಂ ಮನೆಯಲ್ಲಿ ಕುತೂಹಲ ತಂದ ಡಿನ್ನರ್​ ಪಾರ್ಟಿ

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

    ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ವೈರಲ್​ ವಿಡಿಯೋ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts