ಲಂಡನ್: ಮದುವೆಯ ದಿನವು ದಂಪತಿಯ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದು. ಇದೇ ಕಾರಣಕ್ಕೆ ಕೆಲವರು ಡಿಫರೆಂಟ್ ಆಗಿ ಮದುವೆಯಾಗುವ ತೀರ್ಮಾನಕ್ಕೆ ಬರುತ್ತದೆ. ಈ ಹಿಂದೆ ಯಾರೂ ತಮ್ಮಂತೆ ವಿವಾಹವಾಗಿರಬಾರದು ಎಂದು ಕೆಲವರು ಅಂದುಕೊಳ್ಳುವುದುಂಟು.
ಇದೇ ಕಾರಣಕ್ಕೆ ಈ ದಿನವನ್ನು ಹೆಚ್ಚು ವಿಶೇಷವಾಗಿಸಲು ಹೆಚ್ಚಿನವರು ಸೃಜನಶೀಲ ಮತ್ತು ನವನವೀನ ಆಲೋಚನೆಗಳನ್ನು ಮಾಡುತ್ತಾರೆ.
ಇಂಥದ್ದೇ ಒಂದು ಅಪರೂಪದ ಮದುವೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಳೆದ ವರ್ಷ ನಡೆದಿರುವ ಮದುವೆ ಇದಾಗಿದೆ. ಇದರಲ್ಲಿ ಲಂಡನ್ನ ಜೋಡಿ ವಿಚಿತ್ರ ಎನಿಸುವ ರೀತಿಯಲ್ಲಿ ಮದುವೆಯಾಗಿರುವ ದೃಶ್ಯವಿದೆ.
ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ಲಂಡನ್ನಲ್ಲಿ ನಡೆದ ವಿಚಿತ್ರ ಮದುವೆಯ ವೈರಲ್ ವಿಡಿಯೋ ಇಲ್ಲಿದೆ ನೋಡಿ… pic.twitter.com/rmWwRpD7hm
— Vijayavani (@VVani4U) February 2, 2021
ಅಷ್ಟಕ್ಕೂ ಈ ಮದುವೆಯಲ್ಲಿ ಅಂಥದ್ದೇನು ವಿಶೇಷ ಎಂದರೆ, ವಧು ಶವಪೆಟ್ಟಿಗೆಯಿಂದ ಹೊರಕ್ಕೆ ಬಂದು ಮದುವೆಯಾಗಿದ್ದಾಳೆ! ವಿಲಕ್ಷಣ ಎನಿಸುವ ಈ ಘಟನೆಗೆ ಇಂಥದ್ದೊಂದು ಮದುವೆ ಸಾಕ್ಷಿಯಾಗಿದೆ. ಡಿಫರೆಂಟ್ ಆಗಿ ಮದುವೆಯಾಗಬೇಕು ಎನ್ನುವ ಉದ್ದೇಶದಿಂದ ಸಿಯಾರಾ ಎಂಬಾಕೆ ಮದುವೆಗಿಂತ ಮೊದಲು ಶವಪೆಟ್ಟಿಗೆಯೊಳಕ್ಕೆ ಕುಳಿತಿದ್ದಳು.
ಅತ್ತ ವರ ಬಾಬಿ ಕುಕ್ ಉಳಿದ ಮದುವೆಯ ಸಂಪ್ರದಾಯಗಳನ್ನು ಮುಗಿಸಿದ್ದಾನೆ. ನಂತರ ವಧುವು ಮದುವೆಯ ಮುಹೂರ್ತಕ್ಕೆ ಬರುವ ಸಮಯದಲ್ಲಿ ಶವಪೆಟ್ಟಿಗೆಯಿಂದ ಮೇಲೆದ್ದು ಬಂದಿದ್ದಾಳೆ. ಕೆಲವು ಸಮಯ ಉಸಿರುಗಟ್ಟಿದ್ದರಿಂದ ಸುಧಾರಿಸಿಕೊಂಡು ನಗುತ್ತಾ ಮದುಮಗಳು ಹೊರಕ್ಕೆ ಬಂದಿದ್ದಾಳೆ. ಮೂರು ತುಂಡುಗಳ ಸೂಟ್ನಲ್ಲಿರುವ ಈ ವಧು ಶವಪೆಟ್ಟಿಗೆಯಿಂದ ಹೊರಕ್ಕೆ ಬಂದಿರುವುದನ್ನು ನೋಡಿದಾಗ ಕೆಲವರಿಗೆ ಅಸಹ್ಯ ಎನಿಸಿದರೂ ಏನೋ ವಿಶೇಷ ಮದುವೆ ಇದು ಎಂದು ವಿಡಿಯೋ ವೈರಲ್ ಆಗಿದೆ.
ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್ ಗಾಂಧಿ…
ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ
ಒಂದು ಕ್ಷಣವಾಗಿದ್ರೂ ಈತನ ದೇಹ ಬೈಕ್ನಂತೆ ಪೀಸ್ ಪೀಸ್ ಆಗಿರ್ತಿತ್ತು: ಭಯಾನಕ ವಿಡಿಯೋ ವೈರಲ್