ತಬ್ಲಿಘಿಗಳನ್ನು ಭಯೋತ್ಪಾದಕರಂತೆ ಕಾಣಬೇಕು ಎಂದಿದ್ಯಾರು?

Ajay nishad BJP MP2
Published on

ಪಟನಾ: ದೇಶಾದ್ಯಂತ ಕರೊನಾ ಸೋಂಕು ಹರಡುತ್ತಿರುವ ತಬ್ಲಿಘಿ ಜಮಾತ್​ ಸದಸ್ಯರನ್ನು ಭಯೋತ್ಪಾದಕರಂತೆ ಕಾಣಬೇಕು....

ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದವರು ಬಿಹಾರ ಮುಜಫ್ಫರ್​ನಗರದ ಎರಡು ಬಾರಿಯ ಬಿಜೆಪಿ ಸಂಸದ ಅಜಯ್​ ನಿಷಾದ್​.

ಜಮಾತ್​ನಲ್ಲಿ ಪಾಲ್ಗೊಂಡು ಸೋಂಕು ವ್ಯಾಪಿಸಲು ಕಾರಣವಾಗಿರುವ ಎಲ್ಲರನ್ನೂ ಭಯೋತ್ಪಾದಕರಂತೆ ಉಪಚರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮದ್ರಸಾಗಳಲ್ಲಿ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಯಾವುದರ ಅರಿವೂ ಇಲ್ಲದೇ ವೈರಸ್​ ಹರಡಲು ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕರೊನಾ ಸೋಂಕಿತರಿಲ್ಲದೇ, ಹಸಿರು ವಲಯದಲ್ಲಿದ್ದ ಮುಜಫ್ಫರ್​ನಗರ ಕ್ಷೇತ್ರದಲ್ಲಿ ಒಂದೊಂದಾಗಿ ಪ್ರಕರಣಗಳು ಕಾಣಿಸಿಕೊಳ್ಳತೊಡಗಿವೆ. ಈ ಕಾರಣದಿಂದಾಗಿ ಅಜಯ್​ ನಿಶಾದ್​ ತಬ್ಲಿಘಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಮದ್ರಸಾಗಳಲ್ಲಿ ಪಂಕ್ಚರ್​ ಹಾಕುವುದನ್ನಷ್ಟೇ ಅವರಿಗೆ ಹೇಳಿಕೊಡಲಾಗುತ್ತದೆ ಎಂದು ಟೀಕಿಸಿರುವ ನಿಷಾದ್​, ಮುಗ್ಧ ಮಕ್ಕಳಿಗೆ ಮೂಲಭೂತವಾದವನ್ನಷ್ಟೇ ಬೋಧಿಸಲಾಗುತ್ತದೆ. ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಜಮಾತ್​ನಲ್ಲಿ ಪಾಲ್ಗೊಂಡವರು ದೇಶದ ಸಂಕಷ್ಟದ ಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅಜಯ್​ ನಿಷಾದ್​ ಎರಡನೇ ಬಾರಿ ಬಜೆಪಿ ಲೋಕಸಭಾ ಸದಸ್ಯರಾಗಿದ್ದು, ಕೇಂದ್ರದ ಮಾಜಿ ಸಚಿವರಾಗಿದ್ದ ಜಯ್​ ನಾರಾಯಣ್​ ಪ್ರಸಾದ್​ ಅವರ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net