More

    ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು

    ನವದೆಹಲಿ: ಜಗತ್ತಿನ 20ಕ್ಕೂ ಅಧಿಕ ದೇಶಗಳಲ್ಲಿ ಕರೊನಾ ಸಂಕಷ್ಟ ಎದುರಾಗಿದೆ. ಈ ಪೈಕಿ 90ಕ್ಕೂ ಅಧಿಕ ದೇಶಗಳಿಗೆ ಭಾರತ ವೈದ್ಯಕೀಯ ನೆರವು ನಿಡಲು ಮುಂದಾಗಿದೆ. ಈಗಾಗಲೇ 67 ಅಧಿಕ ದೇಶಗಳಿನೆ ನೆರವನ್ನು ರವಾನಿಸಿದೆ.

    ಭಾರತದಲ್ಲಿ ಕರೊನಾ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ವಿಶ್ವಸಂಸ್ಥೆಯ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಇತರ ರಾಷ್ಟ್ರಗಳಿಗೆ ವೈದ್ಯಕೀಯ ನೆರವು ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 110-120 ಕೋಟಿ ರೂ. ವೆಚ್ಚದ ಯೊಜನೆಯನ್ನು ಭಾರತ ರೂಪಿಸಿದೆ.
    ಆರಂಭದಲ್ಲಿ 67 ದೇಶಗಳಿಗೆ 60 ಕೋಟಿ ರೂ. ವೆಚ್ಚದ ನೆರವು ರವಾನಿಸಲು ಯೋಜಿಸಲಾಗಿತ್ತು. ಆದರೆ ಬೇರೆ ರಾಷ್ಟ್ರಗಳಿಂದಲೂ ಬೇಡಿಕೆ ಬಂದಿದ್ದರಿಂದ ಇದನ್ನು 90ಕ್ಕೂ ಅಧಿಕ ದೇಶಗಳಿಗೆ ವಿಸ್ತರಿಸಿದೆ.

    ಇದನ್ನೂ ಓದಿ; ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..! 

    ಈಗಾಗಲೇ 29 ರಾಷ್ಟ್ರಗಳಿಗೆ ವೈದ್ಯಕೀಯ ನೆರವು ರವಾನಿಸಲಾಗಿದೆ. ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ, ಕೊಲ್ಲಿ ರಾಷ್ಟ್ರಗಳು, ಹಿಂದು ಮಹಾಸಾಗರದ ರಾಷ್ಟ್ರಗಳು ಹಾಗೂ ಆಫ್ರಿಕಾ ಖಂಡದ ಆರು ದೇಶಗಳಿಗೆ ಹೈಡ್ರೋಕ್ಸಿಕ್ಲೊರೋಕ್ವಿನ್​ ಹಾಗೂ ಪ್ಯಾರಾಸಿಟಮಲ್​ ಮಾತ್ರೆಗಳನ್ನು ಕಳುಹಿಸಲಾಗಿದೆ. ಇನ್ನು 13.6 ಕೋಟಿ ರೂ. ಮೌಲ್ಯದ ನೆರವು ರವಾನೆಯಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಂತಾರಾಷ್ಟ್ರಿಯ ವಿಮಾನ ಸಂಚಾರ ರದ್ದಾಗಿರುವ ಕಾರಣ ವಿದೇಶಗಳಿಗೆ ನೆರವು ನೀಡುವುದು ಸವಾಲಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ ಭಾರತೀಯ ನೌಕಾಪಡೆ ‘ಐಎನ್​ಎಸ್​ ಕೇಸರಿ’ ನೌಕೆಯನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ಮಾಲ್ಡೀವ್ಸ್​, ಮಾರಿಷಸ್​, ಮಡ್​ಗಾಸ್ಕರ್​, ಕಾಮ್ರೊಸ್​ ಹಾಗೂ ಸಿಶೆಲ್ಸ್​ ರಾಷ್ಟ್ರಗಳಿಗೆ ಪರಿಹಾರ ಸಾಮಗ್ರಿ ವಿತರಿಸಲಾಗಿದೆ. ಈ ನೌಕೆಯಲ್ಲಿದ್ದ ಎರಡು ವೈದ್ಯಕೀಯ ತಂಡವನ್ನು ಮಾರಿಷಸ್​ ಹಾಗೂ ಕಾಮ್ರೊಸ್​ನಲ್ಲಿ ಸೇವೆಗೆ ನಿಯೋಜಿಸಲಾಗಿದೆ.

    ಇದನ್ನೂ ಓದಿ; ರೈಲು ಪ್ರಯಾಣಿಕರೇ ಗಮನಿಸಿ.. ಊಟ, ಹೊದಿಕೆ ನೀವೇ ವ್ಯವಸ್ಥೆ ಮಾಡಿಕೊಳ್ಳಿ

    ಭರವಸೆ ನೀಡಿದ ಶೇ.40 ಸಾಮಗ್ರಿಯನ್ನು ಈಗಾಗಲೇ ತಲುಪಿಸಲಾಗಿದೆ. ಇನ್ನುಳಿದ ಪರಿಹಾರ ಸಾಮಗ್ರಿ ಈ ವಾರದಲ್ಲಿ ಸಾರ್ಕ್​ ದೇಶಗಳಿಗೆ ತಲುಪಲಿದೆ ಎಂದು ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತೀಯ ವೈದ್ಯಕೀಯ ಸೇವೆಗೂ ವಿವಿಧ ದೇಶಗಳಿಂದ ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ. ಕುವೈತ್​ ಹಾಗೂ ಮಾಲ್ಡೀವ್ಸ್​ನಲ್ಲಿ ಭಾರತೀಯರ ತಂಡ ಕಾರ್ಯನಿರತವಾಗಿದೆ. ಬೇರೆ ದೇಶಗಳ ವೈದ್ಯಕೀಯ ತಂಡಕ್ಕೂ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ 8.3 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts