ಸ್ವಿಗ್ಗಿಯ ಮಾಜಿ ಉದ್ಯೋಗಿಯಿಂದ 33 ಕೋಟಿ ರೂ. ದುರುಪಯೋಗ!

swiggi
Published on

ಬೆಂಗಳೂರು: ಪ್ರಸಿದ್ಧ ಫುಡ್ ಡೆಲಿವರಿ ಆಪ್ ಸ್ವಿಗ್ಗಿಯ ಮಾಜಿ ಉದ್ಯೋಗಿ 33 ಕೋಟಿ ರೂ. ದುರುಪಯೋಗಪಡಿಸಿಕೊಂಡಿರುವುದಾಗಿ ಕಂಪನಿ ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.

ಕಂಪನಿಯ ಉನ್ನತ ಅಧಿಕಾರಿಗಳು ಸ್ವಿಗ್ಗಿಯ 2023-24ರ ವಾರ್ಷಿಕ ವರದಿಯನ್ನು ಪರಿಶೀಲಿಸುತ್ತಿರುವಾಗ, ಅಂಗಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬ ಕಂಪನಿಯಿಂದ 33 ಕೋಟಿ ರೂ.ಗಳನ್ನು ಬೇರೆಡೆಗೆ ವರ್ಗಾಯಿಸಿ ವಂಚಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.

ಸಂಸ್ಥೆ ಈ ಕುರಿತು ತನಿಖೆ ನಡೆಸಲು ಅಧಿಕಾರಿಗಳ ತಂಡ ನೇಮಿಸಿದೆ. ದೊಡ್ಡ ಮೊತ್ತದ ಹಣವನ್ನು ಬೇರೆಡೆಗೆ ತಿರುಗಿಸಿದ ಮಾಜಿ ಉದ್ಯೋಗಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸೆಪ್ಟೆಂಬರ್ 4ರಂದು ಬಿಡುಗಡೆ ಮಾಡಿರುವ ಕಂಪನಿಯ ವಾರ್ಷಿಕ ವರದಿಯಲ್ಲಿ ಸ್ವಿಗ್ಗಿ ಈ ಬಗ್ಗೆ ಉಲ್ಲೇಖಿಸಿದೆ ಆದರೆ ಈ ಬಗ್ಗೆ ಸ್ವಿಗ್ಗಿ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಸ್ವಿಗ್ಗಿ ಬಿಡುಗಡೆ ಮಾಡಿರುವ 2023-24ರ ವಾರ್ಷಿಕ ವರದಿ ಪ್ರಕಾರ ಕಂಪನಿಯ ಆದಾಯ 1247 ಕೋಟಿ ರೂ.ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net