ಸ್ವಾಮಿ ವಿವೇಕಾನಂದರು ಹೇಳಿದಂತೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ: ಪ್ರಧಾನಿ ಮೋದಿ

Modi
Published on

ನವದೆಹಲಿ: ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆನ್ನಾಗಿ ಆಚರಣೆ ಮಾಡುತ್ತಿದ್ದು, ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ವಿವೇಕಾನಂದರ ವಿಚಾರಗಳು ಪ್ರೇರಣೆಯಿಂದ ಕೂಡಿವೆ ಎಂದು ಹೇಳಿದರು.

ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ವರ್ಚುವಲ್​ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆರಂಭದಲ್ಲೇ ರಾಷ್ಟ್ರೀಯ ಯುವ ದಿನಾಚರಣೆ ಶುಭಕೋರಿದರು. ನಂತರ ಇವತ್ತಿನ ದಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ವಿವೇಕಾನಂದರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಅವರು ಹೇಳಿದಂತೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು.

ಮುಂದವರಿದು ಮಾತನಾಡಿದ ಅವರು ಸಂವಿಧಾನದ ರಚನೆಗೆ ಸಾಕ್ಷಿಯಾದ ಸಂಸತ್ತಿನ ಕೇಂದ್ರ ಹಾಲ್​ನಲ್ಲಿ ಯುವ ಸಂಸತ್ ಉತ್ಸವ ನಡೆಯುತ್ತಿರುವುದು ಈ ದಿನದ ಮಹತ್ವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಟ್ವೀಟ್​ ಮೂಲಕ ಶುಭಕೋರಿದ ಪ್ರಧಾನಿ, ಸ್ವಾಮಿ ವಿವೇಕಾನಂದರ ಮಹಾನ್ ಆದರ್ಶಗಳಿಂದ ಮತ್ತು ಯುವ ಸಬಲೀಕರಣದ ದೃಷ್ಟಿಯಿಂದ ಪ್ರೇರಿತರಾದ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವವು ದೇಶದ ಯುವಕರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಇದು ಯುವಕರಲ್ಲಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net