More

    ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?

    ಪುಣೆ: ದೇಶಾದ್ಯಂತ ಸಂಕ್ರಾಂತಿ ಮುಗಿದ ಬಳಿಕ ಜನವರಿ 16ರಂದು ಲಸಿಕೆ ಅಭಿಯಾನ ನಡೆಯಲಿದ್ದು ಅದಕ್ಕೂ ಮೊದಲೇ ಇಂದು ಕೋವಿಶೀಲ್ಡ್ ದೇಶದ ವಿವಿಧ ಭಾಗಗಳಿಗೆ ತಲುಪಲಿದೆ. ತೀವ್ರ ಭದ್ರತೆ ನಡುವೆ ಮೊದಲ ಹಂತದಲ್ಲಿ ಲಸಿಕೆಯನ್ನು ಮೂರು ಟ್ರಕ್​ಗಳಲ್ಲಿ ದೇಶದ ವಿವಿಧ ಕಡೆಗಳಿಗೆ ತಲುಪಿಸಲಾಗುತ್ತಿದೆ.

    ಇಂದು ಪುಣೆಯ ಸೇರಮ್ ಇನ್ ಸ್ಟಿಟ್ಯೂಟ್ ನಿಂದ ಬೆಳಗ್ಗೆ 5 ಗಂಟೆಗೆ ಹೊರಡಿರುವ ಟ್ರಕ್​ಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ. ಸೀರಮ್ ಕಂಪನಿಯ ಕೋವಿಶೀಲ್ಡ್ ಲಸಿಕೆ ರವಾನೆ ಕಾರ್ಯ ಶುರುವಾಗಿದೆ. ಪುಣೆಯಿಂದ ಮೂರು ಟ್ರಕ್​ಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿದ ರಾಜ್ಯಗಳಿಗೆ ಲಸಿಕೆ ತಲುಪಲಿದೆ.

    ಮೊದಲ ಹಂತದ ರವಾನೆಯಲ್ಲಿ 1088 ಕೆಜಿ ತೂಕದ ಕೋವಿಶೀಲ್ಡ್ ಲಸಿಕೆ ಹೊತ್ತ 34 ಪೊಟ್ಟಣಗಳನ್ನು ಪುಣೆಯಿಂದ ದೆಹಲಿಗೆ ರವಾನಿಸಲಾಗಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ. ಈ ಪೈಕಿ ರಾಜ್ಯಕ್ಕೂ 6 ಲಕ್ಷದ 34 ಸಾವಿರ ಡೋಸ್ ಲಸಿಕೆ ಬರಲಿದೆ.

    ಮೊದಲ ಭಾಗವಾಗಿ 30 ಕೋಟಿ ಜನರಿಗೆ ಲಸಿಕೆ ಪೂರೈಕೆ ಆಗಲಿದೆ. ಇದರ ಅಂಗವಾಗಿ ಸೀರಮ್ ಕಂಪನಿಯ ಕೋವಿಶೀಲ್ಡ್ ಲಸಿಕೆ ದೇಶದ 13 ರಾಜ್ಯಗಳಿಗೆ ರವಾನೆ ಮಾಡುವ ಕಾರ್ಯ ಆರಂಭಗೊಂಡಿದೆ. ಪುಣೆಯ ಕಂಪನಿಯಿಂದ ವಿಮಾನ ನಿಲ್ದಾಣಕ್ಕೆ ಟ್ರಕ್ ಮೂಲಕ ರವಾನೆಯಾಗಿ, ಅಲ್ಲಿಂದ ದೇಶದ ಇತರೆ ಲಸಿಕಾ ವಿತರಣೆ ರವಾನೆ ಮಾಡಲಾಗುತ್ತಿದೆ.

    ಒಟ್ಟು 8 ವಿಮಾನಗಳು, ಎರಡು ಕಾರ್ಗೊ ವಿಮಾನಗಳು ಮತ್ತು ಇತರ ನಿತ್ಯದ ವಾಣಿಜ್ಯ ವಿಮಾನಗಳು ಲಸಿಕೆಯನ್ನು ಹೊತ್ತೊಯ್ಯಲಿವೆ. ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಲಸಿಕೆಗಳು ವಿತರಣೆಯಾಗಲಿವೆ ಎಂದು ಕೋವಿಶೀಲ್ಡ್ ಲಸಿಕೆಯನ್ನು ಪುಣೆಯಿಂದ ವಿವಿಧ ವಿಮಾನ ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊತ್ತಿರುವ ಎಸ್ ಬಿ ಲಾಜಿಸ್ಟಿಕ್ಸ್ ತಂಡದ ಸಂದೀಪ್ ಬೊಸಲೆ ತಿಳಿಸಿದ್ದಾರೆ.

    ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?
    ಬೆಂಗಳೂರು ಹೊರತುಪಡಿಸಿ, ದೇಶದ 13 ಸ್ಥಳಗಳಾದ ದೆಹಲಿ, ಅಹಮದಾಬಾದ್, ಕೊಲ್ಕತಾ, ಚೆನ್ನೈ, ಕರ್ನಾಲ್, ಹೈದರಾಬಾದ್, ವಿಜಯವಾಡ, ಲಕ್ನೋ, ಗುವಾಹಟಿ, ಭುವನೇಶ್ವರ ಮತ್ತು ಚಂಡೀಗಢಗಳಿಗೆ ಲಸಿಕೆ ತಲುಪಲಿದೆ.

    ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

    ಕರೊನಾದ ಅವತಾರಗಳು ಮುಗಿಯುತ್ತಿಲ್ಲ… ಬ್ರಿಟನ್‌ ಆಯ್ತು, ಈಗ ಜಪಾನ್‌ನಲ್ಲಿ ಮತ್ತೊಂದು ‘ವೇಷ’

    ರಾಷ್ಟ್ರಮಟ್ಟದ ಯೂತ್‌ ಐಕಾನ್ ಮಾಡ್ತೇನೆ- ಸಿಲ್ಕ್‌ಬೋರ್ಡ್‌ ಛೇರ್‌ಮನ್‌ ಮಾಡ್ತೇನೆ ಎಂದ: ನಾನು ನಂಬಿಬಿಟ್ಟೆ!

    ನಿಲ್ಲಿಸಿದ್ದ ಕಾರನ್ನು ಮಹಿಳೆ ಸಹಿತ ಅಪಹರಿಸಿದ ದರೋಡೆಕೋರರು! ಮುಂದೆ ಆದದ್ದು ಭಯಾನಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts