More

    ಕರೊನಾದ ಅವತಾರಗಳು ಮುಗಿಯುತ್ತಿಲ್ಲ… ಬ್ರಿಟನ್‌ ಆಯ್ತು, ಈಗ ಜಪಾನ್‌ನಲ್ಲಿ ಮತ್ತೊಂದು ‘ವೇಷ’

    ಟೊಕಿಯೊ: ಕರೊನಾ ಇದೀಗ ಬೇರೆ ಬೇರೆ ರೂಪಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ಹೊಸ ಅವತಾರ ಎತ್ತುತ್ತಲೇ ಸಾಗಿದೆ. ಬ್ರಿಟನ್‌ನಲ್ಲಿ ರೂಪಾಂತರಿ ಕರೊನಾ ಸುದ್ದಿ ಮಾಡುತ್ತಿದ್ದರೆ ಇದೀಗ ಜಪಾನ್‌ನಲ್ಲಿ ಕರೊನಾದ ಹೊಸ ವೈರಸ್‌ ಪತ್ತೆಯಾಗಿದೆ.

    ಈ ಕುರಿತು ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್’ ಮಾಹಿತಿ ನೀಡಿದೆ. ಬ್ರಿಟನ್‌ ಮಾದರಿಯಲ್ಲಿಯೇ ಆದರೆ ಹೊಸ ರೂಪದಲ್ಲಿ ಜಪಾನ್‌ನಲ್ಲಿ ಕೂಡ ಕೊರೊನಾ ವೈರಸ್‌ ಹೊಸ ಆವೃತ್ತಿ ಪತ್ತೆಯಾಗಿದೆ ಎಂದು ಇದು ಮಾಹಿತಿ ನೀಡಿದೆ. ಬ್ರೆಝಿಲ್‌ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ ಕರೊನಾ ವೈರಸ್ ಪತ್ತೆಯಾಗಿರುವುದಾಗಿ ಜಪಾನ್‌ನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ನಿನ್ನೆ ಈ ಕುರಿತು ಜಪಾನ್ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮಾದರಿಯಲ್ಲಿಯೇ ಹೊಸ ಕರೊನಾ ವೈರಸ್ ಲಕ್ಷಣಗಳನ್ನು ಹೊಂದಿರುವ ಹೊಸ ರೂಪಾಂತರಿಯೊಂದು ಜಪಾನ್‌ನಲ್ಲಿ ಪತ್ತಯಾಗಿದೆ. ಇದು ಬ್ರಿಟನ್‌ ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಭಿನ್ನವಾದದ್ದೋ ಅಥವಾ ಅದೇ ವೈರಸ್‌ ಇಲ್ಲಿಯೂ ಪತ್ತೆಯಾಗಿದೆಯೋ ಎಂಬ ಬಗ್ಗೆ ಇನ್ನಷ್ಟೇ ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಆದರೆ ಮೇಲ್ನೋಟಕ್ಕೆ ಇದೊಂದು ಹೊಸ ಮಾದರಿಯ ಕರೊನಾ ಇರಬಹುದು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಜಪಾನ್ ಆರೋಗ್ಯ ಸಚಿವಾಲಯ ಕೂಡ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿದ್ದು, ಜ.2ರಂದು ಬ್ರೆಝಿಲ್‌ನಿಂದ ಜಪಾನ್ ಹನೇಡಾ ವಿಮಾನ ನಿಲ್ದಾಣಕ್ಕೆ ಬಂದಿರುವ ನಾಲ್ವರು ಪ್ರಯಾಣಿಕರಲ್ಲಿ ಹೊಸ ರೂಪದ ವೈರಸ್ ಕಾಣಿಸಿಕೊಂಡಿದೆ. ಈ ಪೈಕಿ 40 ವರ್ಷದ ಪುರುಷನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದೆ.

    ವಿಶ್ವ ಆರೋಗ್ಯ ಸಂಸ್ಥೆಗೂ ಈ ಕುರಿತು ಮಾಹಿತಿ ನೀಡಲಾಗಿದ್ದು,ರೂಪಾಂತರ ವೈರಸ್ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್‌ಐಐಡಿ ತಿಳಿಸಿದೆ.

    ಯಾರ ಮೇಲಾದರೂ ಕೋಪಬಂದು ಬಾರಿಸಬೇಕು ಎನ್ನಿಸಿದರೆ, ರಸ್ತೆಗೆ ಓಡಿಹೋಗ್ತಾರೆ ಇಲ್ಲಿಯ ಮಂದಿ!

    ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

    ಜಗತ್‌ಪ್ರಸಿದ್ಧ ನಾಸ್ಟ್ರಾಡಾಮಸ್ ಭವಿಷ್ಯವಾಣಿಯಲ್ಲೇನಿದೆ? ಈತ ಹೇಳಿದ್ದೆಲ್ಲ ನಿಜವಾಗಿವೆಯಂತೆ!

    ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts