More

  ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರುತು ಪತ್ತೆ

  ಕೆ.ಆರ್.ಸಾಗರ: ಗಿರಿಯಾರಹಳ್ಳಿ ಬಳಿಯ ಕೆ.ಆರ್.ಸಾಗರ ಹಿನ್ನೀರಿನಲ್ಲಿ ಶುಕ್ರವಾರ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದ ಶವದ ಗುರುತು ಪತ್ತೆಯಾಗಿದೆ.


  ಮೈಸೂರು ನಗರದ ಟಿ.ಕೆ.ಲೇಔಟ್ ನಿವಾಸಿ ಪ್ರಮೋದ್(44) ಎಂದು ಗುರುತಿಸಲಾಗಿದೆ. ಮಾ.12ರಂದು ಮನೆಯಿಂದ ಬೈಕ್‌ನಲ್ಲಿ ಹೊರ ಹೋದವರು ವಾಪಸ್ ಬಂದಿರಲಿಲ್ಲ ಎಂದು ಪಾಲಕರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಪರಿಚಿತ ಶವದ ಬಗ್ಗೆ ಕೆ.ಆರ್.ಸಾಗರ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಗುರುತಿಸಲಾಗಿದೆ.


  ಹಿನ್ನೀರಿನ ಬಳಿಯ ವೇಣುಗೋಪಾಲಸ್ವಾಮಿ ದೇವಾಲಯ ಸಮೀಪದ ನದಿ ತೀರದಲ್ಲಿ ಪ್ರಮೋದ್ ಬೈಕ್ ಕೂಡ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದು ಪಾಲಕರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts