More

    ಯಾರ ಮೇಲಾದರೂ ಕೋಪಬಂದು ಬಾರಿಸಬೇಕು ಎನ್ನಿಸಿದರೆ, ರಸ್ತೆಗೆ ಓಡಿಹೋಗ್ತಾರೆ ಇಲ್ಲಿಯ ಮಂದಿ!

    ನ್ಯೂಯಾರ್ಕ್‌: ಕೆಲವೊಮ್ಮೆ ಯಾರದ್ದಾದರೂ ಮೇಲೆ ವಿಪರೀತ ಸಿಟ್ಟುಬಂದಿರುತ್ತದೆ. ಆದರೆ ಅದನ್ನು ಅವರ ಎದುರು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಅದು ಕುಟುಂಬಸ್ಥರ ಮೇಲೆ ಇರಬಹುದು, ಇಲ್ಲವೇ ಸಹೋದ್ಯೋಗಿಗಳು, ನೆರೆಹೊರೆಯವರು, ಸ್ನೇಹಿತರು ಯಾರೇ ಇರಬಹುದು.

    ಎಷ್ಟೋ ಸಂದರ್ಭಗಳಲ್ಲಿ ಅವರನ್ನು ಚೆನ್ನಾಗಿ ಬಾರಿಸಿಬಿಡುವಷ್ಟು ಸಿಟ್ಟುಬಂದರೂ ಹಾಗೆ ಮಾಡಲು ಆಗುವುದಿಲ್ಲ. ಒಳಗೊಳಗೇ ಕೊತಕೊತ ಎಂದು ಕುದಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ಇನ್ನಾರೋ ಬಡಪಾಯಿಗಳ ಮೇಲೆ ತೀರಿಸಿಕೊಳ್ಳುವುದು ದಿನನಿತ್ಯವೂ ಕಾಣುತ್ತಿರುತ್ತೇವೆ. ಕಚೇರಿಗಳಲ್ಲಿ ಮೇಲಧಿಕಾರಿಗಳ ಜತೆ ತೀರಿಸಿಕೊಳ್ಳಲಾಗದ ಸಿಟ್ಟನ್ನು ಮನೆಯಲ್ಲಿ ಪತ್ನಿ- ಪತಿ ಇಲ್ಲವೇ ಮಕ್ಕಳ ಮೇಲೆ ಬೇರೆ ರೀತಿ ತೀರಿಸಿಕೊಳ್ಳುವುದು, ಮನೆಯಲ್ಲಿ ಪತಿ-ಪತ್ನಿಯ ಮೇಲೆ ತೀರಿಸಿಕೊಳ್ಳಲು ಸಾಧ್ಯವಾಗದ ಸಿಟ್ಟನ್ನು ವಿನಾಕಾರಣ, ಕಚೇರಿಯ ತಮ್ಮ ಅಧೀನ ಉದ್ಯೋಗಿಗಳ ಮೇಲೆ ತೀರಿಸಿಕೊಳ್ಳುವುದು ಇದು ಮನುಷ್ಯರ ಜೀವನದ ಭಾಗವಾಗಿ ಹೋಗಿದೆ.

    ಆದರೆ ಹೀಗೆ ಸಿಟ್ಟುಬಂದಾಗ ಅದನ್ನು ಬಡಪಾಯಿಗಳ ಮೇಲೆ ತೀರಿಸಿಕೊಳ್ಳದೇ ಸುಲಭವಾಗಿ ತೀರಿಸಿಕೊಳ್ಳುವ ಮಾರ್ಗವನ್ನು ನ್ಯೂಯಾರ್ಕ್‌ ಕಂಡುಹಿಡಿದಿದೆ. ಇದಕ್ಕಾಗಿಯೇ ರಸ್ತೆ ರಸ್ತೆಗಳಲ್ಲಿ ಪಂಚಿಂಗ್‌ ಬ್ಯಾಗ್‌ ವ್ಯವಸ್ಥೆ ಮಾಡಿದೆ. ಸಿನಿಮಾಗಳಲ್ಲಿ ನೀವೆಲ್ಲಾ ನೋಡಿರಬಹುದು. ಅದರ ನಾಯಕನಿಗೆ ಯಾರದ್ದೋ ಮೇಲೆ ಸಿಟ್ಟುಬಂದಾಗ ಅದರಲ್ಲಿಯೂ ಹೆಚ್ಚಾಗಿ ನಾಯಕಿಯ ಮೇಲೆ ಮುನಿಸಿಕೊಂಡಾಗ ಹೋಗಿ ಪಂಚಿಂಗ್‌ ಬ್ಯಾಗ್‌ಗೆ ಗುದ್ದುತ್ತಾನಲ್ಲ, ಅದೇ ರೀತಿ ಇಲ್ಲಿ ರಸ್ತೆ ರಸ್ತೆಗಳಿಗೂ ಇಂಥ ಬ್ಯಾಗ್‌ ಇಡಲಾಗಿದೆ.

    ಒಂದು ವೇಳೆ ಯಾರ ಮೇಲಾದರೂ ವಿಪರೀತ ಸಿಟ್ಟು ಬಂದು ಆ ಆಕ್ರೋಶವನ್ನು ಹೊರಹಾಕಬೇಕೆಂದುಕೊಂಡರೆ ನ್ಯೂಯಾರ್ಕ್‌ ಜನ ಕೂಡಲೇ ರಸ್ತೆಗೆ ಓಡಿಹೋಗಿ ಈ ಪಂಚಿಂಗ್‌ಬ್ಯಾಗ್‌ ಮೇಲೆ ಸೇಡು ತೀರಿಸಿಕೊಳ್ಳುತ್ತಾರಂತೆ. ಆ ಪಂಚಿಂಗ್‌ ಬ್ಯಾಗ್‌ ಜಾಗದಲ್ಲಿ ತಾವು ಯಾರನ್ನು ಚೆನ್ನಾಗಿ ಚಚ್ಚಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡಿರುತ್ತಾರೋ ಅವರನ್ನು ಕಲ್ಪನೆ ಮಾಡಿಕೊಂಡು, ಮನಸೋ ಇಚ್ಛೆ ಆ ಬ್ಯಾಗ್‌ಗೆ ಹೊಡೆದು ಸಮಾಧಾನ ಪಟ್ಟುಕೊಂಡು ಖುಷಿಯಿಂದ ಮನೆಗೆ ಮರಳುತ್ತಿದ್ದಾರಂತೆ.

    ಸಾರ್ವಜನಿಕರ ಒತ್ತಡ ತಗ್ಗಿಸಲೆಂದು ಪುಟ್​ಪಾತ್​ ಪಕ್ಕದಲ್ಲಿ ಪಂಚಿಂಗ್​ ಬ್ಯಾಗ್​ಗಳನ್ನು ಅಳವಡಿಸಲಾಗಿದೆ. ನ್ಯೂಯಾರ್ಕ್​ ಡಿಸೈನ್​ ವೀಕ್​ 2019 ಪ್ರಯುಕ್ತ ಈ ಪಂಚಿಂಗ್​ ಬ್ಯಾಗ್​ಗಳನ್ನು ವಿನ್ಯಾಸ ಮಾಡಲಾಗಿದೆ. ಇದು ಬಾಕ್ಸಿಂಗ್​ ಟ್ರೇನಿಂಗ್​​ಗಾಗಿ​ ನೀಡಲಾದ ಪ್ರೇರಣೆ ಎನ್ನಲಾಗಿದೆ.
    ಸದ್ಯ ಈ ಪಂಚಿಂಗ್​ ಬ್ಯಾಗ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ವೀಕ್ಷಕರಿಂದ ಈ ವ್ಯವಸ್ಥೆಗಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವಾರು ಮಂದಿ ಇಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿರುವ ದೃಶ್ಯಗಳು ವೈರಲ್‌ ಆಗುತ್ತಿವೆ.

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

    ಜಗತ್‌ಪ್ರಸಿದ್ಧ ನಾಸ್ಟ್ರಾಡಾಮಸ್ ಭವಿಷ್ಯವಾಣಿಯಲ್ಲೇನಿದೆ? ಈತ ಹೇಳಿದ್ದೆಲ್ಲ ನಿಜವಾಗಿವೆಯಂತೆ!

    ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts