More

    ರಾಷ್ಟ್ರಮಟ್ಟದ ಯೂತ್‌ ಐಕಾನ್ ಮಾಡ್ತೇನೆ- ಸಿಲ್ಕ್‌ಬೋರ್ಡ್‌ ಛೇರ್‌ಮನ್‌ ಮಾಡ್ತೇನೆ ಎಂದ: ನಾನು ನಂಬಿಬಿಟ್ಟೆ!

    ಬೆಂಗಳೂರು: ರಾಜಕಾರಣಿಗಳ ಹೆಸರು ಹೇಳಿಕೊಂಡು, ಉನ್ನತ ಹುದ್ದೆ ದೊರಕಿಸಿಕೊಡುವುದಾಗಿ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟಿ ಕೋಟಿಗಟ್ಟಲೆ ಗುಳುಂ ಮಾಡಿರುವ ಯುವರಾಜ್‌ನ ವಿರುದ್ಧ ಅಗೆದಷ್ಟೂ ಬಗೆದಷ್ಟೂ ಹಗರಣಗಳು ಹೊರಬೀಳುತ್ತಿವೆ.

    ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೂ ಸೇರಿದಂತೆ ಹಲವಾರು ಮಂದಿಗೆ ಪಂಗನಾಮ ಹಾಕಿರುವ ಈತನ ವಿರುದ್ಧ ಮೋಸ ಹೋದವರೆಲ್ಲರೂ ದೂರು ದಾಖಲು ಮಾಡುತ್ತಿದ್ದಾರೆ.

    ಇದೀಗ ಬಿಲ್ಡರ್‌ ಇನಿತ್‌ಕುಮಾರ್‌ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಅಣ್ಣನ ಮಗ ತಾನು ಎಂದು ಹೇಳಿಕೊಂಡು ವಿನಿತ್‌ ಅವರಿಗೆ ಪಂಗನಾಮ ಹಾಕಿದ್ದಾನೆ ಯುವರಾಜ್‌.

    ನಿಮ್ಮಂಥವರು ರಾಷ್ಟ್ರಮಟ್ಟದ ಯೂತ್‌ ಐಕನ್‌ ಆಗಬೇಕು, ಆದ್ದರಿಂದ ನಿಮ್ಮಂಥ ಟ್ಯಾಲೆಂಟ್‌ಗಳು ಉನ್ನತ ಹುದ್ದೆಯಲ್ಲಿ ಇರಬೇಕು ಎಂದು ವಿನಿತ್‌ ಅವರಿಗೆ ಹೇಳಿದ್ದ ಯುವರಾಜ್‌, ಅವರನ್ನು ಸಿಲ್ಕ್‌ಬೋರ್ಡ್‌ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿ 30 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.

    ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಪೋಸ್ಟ್‌ಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೆಳಿ ಮೂರು ಕೋಟಿ ರುಪಾಯಿ ಕೆಳಿದ್ದ. ಅಷ್ಟು ಹಣ ನನ್ನ ಬಳಿ ಇಲ್ಲ ಎಂದಿದ್ದಾರೆ. ಆಗ 2 ಕೋಟಿ 50 ಲಕ್ಷ ಕೊಡಿ ಎಂದು ಅಂತೂ 30 ಲಕ್ಷಕ್ಕೆ ಒಪ್ಪಿಕೊಂಡಿದ್ದ. ಕಳೆದ ನವೆಂಬರ್‌ನಲ್ಲಿ ಹಣ ಕೊಟ್ಟಿದ್ದೇನೆ ಎಂದು ವಿನಿತ್‌ ದೂರಿನಲ್ಲಿ ಹೇಳಿದ್ದಾರೆ.

    ಬಿ.ಎಲ್‌.ಸೋತೋಷ್‌ ಅವರ ಹೆಸರು ಹೇಳಿದ್ದರಿಂದ ನಾನು ನಂಬಿಬಿಟ್ಟೆ. ನಿಮ್ಮಂಥವರು ರಾಜಕೀಯಕ್ಕೆ ಬರಬೇಕು ಎಂದೆಲ್ಲಾ ಹೇಳಿದ್ದು, ನಾನು ಮೋಸ ಹೋದೆ ಎಂದಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

    ಯಾರ್ರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ!

    ಸರ್ಕಾರಕ್ಕೆ ಟರ್ನಿಂಗ್‌ ಪಾಯಿಂಟ್‌ ಕೊಟ್ಟ ನನ್ನನ್ನು ಕೆಳಗಿಸೋ ಧೈರ್ಯ ಯಾರಿಗಿದೇರಿ?

    ಮಹಿಳಾ ಪೈಲಟ್‌ಗಳಿಂದ ಇತಿಹಾಸ ನಿರ್ಮಾಣ- ದಾಖಲೆ ಪುಟ ಸೇರಿದ ನಾಲ್ವರು ವನಿತೆಯರು

    ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಮಹಾರಾಷ್ಟ್ರದಲ್ಲಿ 900 ಕೋಳಿ ಮರಿಸಾವು: ಎಂಟು ರಾಜ್ಯಗಳಲ್ಲಿ ಹಕ್ಕಿಜ್ವರ ಕನ್‌ಫರ್ಮ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts