ಶಂಕಿತ ಉಗ್ರರ ಬಂಧನ, ಸೆಂಟ್ರಲ್​ ಜೈಲಲ್ಲಿದ್ದವರ ಜತೆಗಿನ ಸಂಪರ್ಕ ಬಯಲು: ಕೇಂದ್ರ ಕಾರಾಗೃಹದಲ್ಲಿ ಇಂದೇನಾಯ್ತು?

ADGP
ಸೆಂಟ್ರಲ್​ ಜೈಲ್​ಗೆ ಭೇಟಿ ನೀಡಿ ಹೊರಟ ಎಡಿಜಿಪಿ
Published on

ಬೆಂಗಳೂರು: ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಐವರು ಶಂಕಿತ ಉಗ್ರರನ್ನು ಇಂದು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಹಲವು ಆತಂಕಕಾರಿ ಸಂಗತಿಗಳು ಬೆಳವಣಿಗೆಗಳು ಬೆಳಕಿಗೆ ಬಂದಿವೆ.

ಮಾತ್ರವಲ್ಲ, ಶಂಕಿತ ಉಗ್ರರು ಸೆಂಟ್ರಲ್ ಜೈಲ್​ನಲ್ಲಿದ್ದವರ ಜತೆ ಸಂಪರ್ಕ ಹೊಂದಿದ್ದರು ಎಂಬ ಸಂಗತಿಯೂ ಬಹಿರಂಗಗೊಂಡಿದೆ. ಇಂಥದ್ದೊಂದು ವಿಷಯ ಬಯಲಾಗುತ್ತಿದ್ದಂತೆ ಕೇಂದ್ರ ಕಾರಾಗೃಹ ವ್ಯಾಪ್ತಿಯಲ್ಲಿ ಸಂಚಲನ ಉಂಟಾಗಿದೆ.

ಶಂಕಿತ ಉಗ್ರರ ಬಂಧನ ಹಾಗೂ ಸೆಂಟ್ರಲ್ ಜೈಲ್​ನಲ್ಲಿದ್ದವರ ಜತೆ ಅವರ ಸಂಪರ್ಕದ ಹಿನ್ನೆಲೆಯಲ್ಲಿ ಎಡಿಜಿಪಿ (ಬಂದೀಖಾನೆ) ಮಾಲಿನಿ ಕೃಷ್ಣಮೂರ್ತಿ ಅವರು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಇಂದು ಭೇಟಿ ನೀಡಿದ್ದಾರೆ. ಆದರೆ ಭೇಟಿ ಬಳಿಕ ಅವರು ಸುದ್ದಿಗಾರರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗಿದ್ದಾರೆ.

ಸೆಂಟ್ರಲ್ ಜೈಲ್​​​ಗೆ ಭೇಟಿ ನೀಡಿದ ಅವರು ಅಲ್ಲಿನ ಅಡುಗೆ ಮನೆ ಸೇರಿದಂತೆ ಎಲ್ಲಾ ಬ್ಯಾರಕ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೈಲಿನ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇಡೀ ಜೈಲನ್ನು ಜಾಲಾಡಿರುವ ಅವರು ಅಲ್ಲಿನ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜೈಲ್​ನಲ್ಲಿನ ಗಾಂಜಾ, ಮೊಬೈಲ್​​ಫೋನ್​ ದಂಧೆ ನಿಲ್ಲಿಸಲು ಖಡಕ್ ಸೂಚನೆ ನೀಡಿದ್ದು, ತಪ್ಪಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net