ಈ ದಿನ ರಿಲೀಸ್​ ಆಗಲಿದೆ ನಟಿ ಸುಶ್ಮಿತಾ ಸೇನ್ ಅಭಿನಯದ 'ತಾಲಿ' ವೆಬ್​ ಸೀರಿಸ್​ ಟ್ರೇಲರ್

Untitled design - 2023-08-06T203954.203
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಬಾಲಿವುಡ್​ನ ಖ್ಯಾತ ನಟಿ ಸುಶ್ಮಿತಾ ಸೇನ್ ಅಭಿನಯದ ಬಹುನಿರೀಕ್ಷಿತ 'ತಾಲಿ' ವೆಬ್​ಸಿರೀಸ್​ನ ಟ್ರೇಲರ್​ ಯಾವಾಗ ರಿಲೀಸ್​ ಆಗಲಿದೆ ಎಂಬುದರ ಬಗ್ಗೆ ಸ್ವತಃ ಚಿತ್ರದ ನಟಿಯೇ ಅಧಿಕೃತ ಮಾಹಿತಿ ನೀಡಿದ್ದಾರೆ.

ಭಾನುವಾರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುಂದಿನ ವೆಬ್​ ಸಿರೀಸ್​ 'ತಾಲಿ' ಬಗ್ಗೆ ಮಾಹಿತಿ ನೀಡಿದ ನಟಿ, ಚಿತ್ರದ ಕಿರು ವಿಡಿಯೋವನ್ನು ಪೋಸ್ಟ್​ ಮಾಡುವ ಮುಖೇನ ಟ್ರೇಲರ್ ನಾಳೆ (ಆಗಸ್ಟ್​ 07) ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಸುಶ್ಮಿತಾ ಸೇನ್​ ಬಯೋಪಿಕ್​ ವೆಬ್ ಸಿರೀಸ್​​ನಲ್ಲಿ ನಟಿಸಿದ್ದು, ತೃತೀಯ ಲಿಂಗಿ ಕಾರ್ಯಕರ್ತೆಯಾದ ಗೌರಿ ಸಾವಂತ್ ಅವರ ಪಾತ್ರವನ್ನು ತೆರೆಯ ಮೇಲೆ ತರುತ್ತಿದ್ದಾರೆ. ಸದ್ಯ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಅಭಿಪ್ರಾಯಗಳು ಹರಿದುಬಂದಿದೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶನದ ಈ ಬಯೋಪಿಕ್​, ಗೌರಿ ಸಾವಂತ್ ಅವರ ಸ್ಫೂರ್ತಿದಾಯಕ ಜೀವನ ಆಧರಿತ. ಅವರ ಬಾಲ್ಯ, ಪರಿವರ್ತನೆ ಮತ್ತು ಭಾರತದಲ್ಲಿ ಟ್ರಾನ್ಸ್‌ಜೆಂಡರ್ ಚಳವಳಿಯನ್ನು ಕ್ರಾಂತಿಗೊಳಿಸಲು ಪಟ್ಟ ಶ್ರಮ, ನೀಡಿದ ಕೊಡುಗೆಯ ಕುರಿತು ಚಿತ್ರವನ್ನು ಚಿತ್ರಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಆಗಸ್ಟ್​ 15 ರಂದು ಜಿಯೋ ಸಿನಿಮಾದಲ್ಲಿ ತಾಲಿ ವೆಬ್​ ಸಿರೀಸ್​ ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net