

ತಮಿಳುನಾಡು: ಕಾಲಿವುಡ್ ನಟರ ಪೈಕಿ ಸೂರ್ಯ ಅವರಿಗೆ ತೆಲುಗು ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದು, ಟಾಲಿವುಡ್ ಅಂಗಳದಲ್ಲೂ ಅವರ ಸಿನಿಮಾಗಳನ್ನು ವಿಶೇಷವಾಗಿ ಸಂಭ್ರಮಿಸುತ್ತಾರೆ. ಸದ್ಯ ಇದೀಗ ಸೂರ್ಯ ಅಭಿನಯಿಸಿದ್ದ, ಬ್ಲಾಕ್ಬಸ್ಟರ್ 'ಸೂರ್ಯ S/o ಕೃಷ್ಣನ್' ಚಿತ್ರವನ್ನು ಫ್ಯಾನ್ಸ್ಗಳಿಗೆ ಎಂದು ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಲಾಗಿದೆ.
ಕಲ್ಟ್ ಕ್ಲಾಸಿಕ್ 'ಸೂರ್ಯ S/o ಕೃಷ್ಣನ್' (ವಾರಣಂ ಆಯಿರಂ) ಚಿತ್ರದ ಮರು ಬಿಡುಗಡೆಗೆ ಸಿನಿಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ರಿಲೀಸ್ಗೂ ಮುನ್ನ ಊಹಿಸಿದಂತೆ ಓಪನಿಂಗ್ ಸಿಗದಿದ್ದರೂ ತದನಂತರ ಹೂವಿನ ಹಾರ, ಜೈಕಾರಗಳ ಮುಖೇನ ಅಭಿಮಾನಿಗಳು ಥಿಯೇಟರ್ನಲ್ಲಿ ಚಿತ್ರವನ್ನು ಸಂಭ್ರಮಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಣೆ ಮಾಡಿದ ಫ್ಯಾನ್ಸ್ನ ಬೆಂಬಲ ಮುಂದಿನ ವರ್ಷ ರಿಲೀಸ್ ಆಗಲಿರುವ 'ಕಂಗುವ' ಚಿತ್ರದ ಸಕ್ಸಸ್ಗೆ ದೊಡ್ಡ ಕಾರಣವಾಗಲಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.
ಖ್ಯಾತ ನಿರ್ಮಾಪಕ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ಸೂರ್ಯ, ಸಮೀರಾ ರೆಡ್ಡಿ, ಸಿಮ್ರಾನ್ ಮತ್ತು ಸ್ಯಾಂಡಲ್ವುಡ್ ನಟಿ ದಿವ್ಯಾ ಸ್ಪಂದನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).