

ನವದೆಹಲಿ: ಸುಪ್ರೀಂಕೋರ್ಟ್‌ನ ಅಧಕೃತ ಯೂಟ್ಯೂಬ್ ಚಾನೆಲ್ ಅನ್ನು ಶುಕ್ರವಾರ (ಸೆಪ್ಟೆಂಬರ್ 20) ಹ್ಯಾಕ್ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗಿದೆ. ಈ ಘಟನೆಯು ನ್ಯಾಯಾಂಗದ ಸಂಭಾವ್ಯ ಭದ್ರತಾ ಉಲ್ಲಂಘನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಕಂಪನಿ 'ರಿಪ್ಪಲ್ ಲ್ಯಾಬ್ಸ್' ನಿರ್ಮಿಸಿದ 'ಕ್ರಿಪ್ಟೋಕರೆನ್ಸಿ' ಪ್ರಚಾರ ಮಾಡುವ ವಿಡಿಯೋ ಸುಪ್ರೀಂಕೋರ್ಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗಲು ಪ್ರಾರಂಭಿಸಿದೆ. ಆದರೆ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ ಖಾಲಿ ವಿಡಿಯೋ ಪ್ರಸಾರವಾಗುತ್ತಿದೆ. ಬ್ರಾಡ್ ಗಾರ್ಲಿಂಗ್‌ಹೌಸ್: ರಿಪ್ಪಲ್ ರೆಸ್ಪಾಂಡ್ಸ್ ಟು ದಿ SEC's $2 ಬಿಲಿಯನ್ ಫೈನ್! XRP PRICE PREDICTION" ಶೀರ್ಷಿಕೆಯಡಿ ತಪ್ಪುದಾರಿಗೆಳೆಯುವ ವಿಡಿಯೋವನ್ನು ಲೈವ್ ಸ್ಟ್ರೀಮ್ ಮಾಡಲಾಗಿದೆ.
ಸಾಂವಿಧಾನಿಕ ಪೀಠದ ಮುಂದೆ ಪಟ್ಟಿ ಮಾಡಲಾದ ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಪ್ರಕರಣಗಳ ನೇರ ವಿಚಾರಣೆಗಳನ್ನು ಸ್ಟ್ರೀಮ್ ಮಾಡಲು ಸುಪ್ರೀಂಕೋರ್ಟ್ ಯೂಟ್ಯೂಬ್ ಅನ್ನು ಬಳಸುತ್ತದೆ. ಆಗಿನ ಸಿಜೆಐ ಯುಯು ಲಲಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಸರ್ವಾನುಮತದ ನಿರ್ಧಾರದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಇದರ ಅಡಿಯಲ್ಲಿ 2018ರಲ್ಲಿ ಪ್ರಕರಣದ ಮಹತ್ವದ ತೀರ್ಪಿನ ನಂತರ ಎಲ್ಲಾ ಸಾಂವಿಧಾನಿಕ ಪೀಠದ ವಿಚಾರಣೆಯ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡಲು ಸುಪ್ರೀಂಕೋರ್ಟ್ ನಿರ್ಧರಿಸಿತು. ಪ್ರಸ್ತುತ ಸುಪ್ರೀಂಕೋರ್ಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಕೊನೆಯ ವಿಚಾರಣೆಯ ವಿಡಿಯೋವನ್ನು ಹ್ಯಾಕರ್‌ಗಳು ಖಾಸಗಿಯಾಗಿ ಮಾಡಿದ್ದಾರೆ.
ಏನಾಯಿತು ಎಂಬುದರ ಬಗ್ಗೆ ನಮಗೆ ಖಚಿತವಿಲ್ಲ, ಆದರೆ ಚಾನೆಲ್ ಅನ್ನು ತಿದ್ದಲಾಗಿದೆಯಂತೆ. ಸುಪ್ರೀಂಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನ ಸಮಸ್ಯೆ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಇದನ್ನು ಸರಿಪಡಿಸಲು ನ್ಯಾಯಾಲಯದ ಐಟಿ ತಂಡವು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಸಹಾಯವನ್ನು ಕೋರಿದೆ ಎಂದು ಸುಪ್ರೀಂಕೋರ್ಟ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.(ಏಜೆನ್ಸೀಸ್)