ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ವೀನಸ್ ಆರ್ಬಿಟರ್ ಮಿಷನ್ ಮತ್ತು ಚಂದ್ರಯಾನ-4 ಮಿಷನ್‌ಗೆ ಗ್ರೀನ್ ಸಿಗ್ನಲ್ ನೀಡಿದೆ. ಬುಧವಾರ (ಸೆಪ್ಟೆಂಬರ್ 18) ನಡೆದ ಕೇಂದ್ರ ಸಚಿವ ಸಂಪುಟವು ವೀನಸ್ ಆರ್ಬಿಟರ್ ಮಿಷನ್ (ವಿಒಎಂ) ಜತೆಗೆ ಬಾಹ್ಯಾಕಾಶಕ್ಕೆ ಕಾರ್ಯಾಚರಣೆಗಾಗಿ 31,772 ಕೋಟಿ ರೂಪಾಯಿ ಮೊತ್ತದೆ ಹಲವು ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಇದನ್ನು ಓದಿ: ಸ್ವದೇಶಿ ಯುದ್ಧ ವಿಮಾನ LCA ತೇಜಸ್‌ನ ಮೊದಲ ಮಹಿಳಾ ಫೈಟರ್ ಪೈಲಟ್; ಇತಿಹಾಸ ಸೃಷ್ಟಿಸಿದ ಮೋಹನಾ ಸಿಂಗ್
ವೀನಸ್ ಆರ್ಬಿಟರ್ ಮಿಷನ್ ಶುಕ್ರ ಗ್ರಹವನ್ನು ಅನ್ವೇಷಿಸಲು ಮತ್ತು ಅಧ್ಯಯನ ಮಾಡುವ ಸರ್ಕಾರದ ದೃಷ್ಟಿಯ ಕಡೆಗೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಚಂದ್ರಯಾನ-4 ಮಿಷನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ಹಂತವು ಚಂದ್ರನಿಗೆ ಮಾನವಸಹಿತ ಮಿಷನ್ ಕಳುಹಿಸುವುದು. ಇದರೊಂದಿಗೆ ಗಗನ್ಯಾನ್ ಫಾಲೋ-ಆನ್, ಭಾರತೀಯ ಬಾಹ್ಯಾಕಾಶ ನಿಲ್ದಾಣ, ಮುಂದಿನ ಪೀಳಿಗೆಯ ಉಡಾವಣಾ ವಾಹನದ ಅಭಿವೃದ್ಧಿಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ದೃಷ್ಟಿ ಮತ್ತು ಮಾರ್ಗಸೂಚಿಗೆ ಈಗ ಎತ್ತರಕ್ಕೆ ಹಾರಲು ರೆಕ್ಕೆಗಳನ್ನು ನೀಡಲಾಗಿದೆ. 2040ರ ಅಂತ್ಯದ ವೇಳೆಗೆ ಒಬ್ಬ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಾದರೆ ನಮ್ಮ ಪ್ರಧಾನಿಯವರ ದೃಷ್ಟಿಯಲ್ಲಿ, ನಾವು ತಂತ್ರಜ್ಞಾನದ ಮೇಲೆ ನಂಬಿಕೆ ಇಡಬೇಕು. ಗುರಿ ಸಾಧನೆಗೆ 2035ರವರೆಗೆ ಗಡುವು ನೀಡಲಾಗಿದೆ. ನಾವು 2028ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾಡ್ಯೂಲ್ ಅನ್ನು ಪ್ರಾರಂಭಿಸಲು ಯೋಜಿಸಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್ ಸೋಮನಾಥ್ ತಿಳಿಸಿದರು.
ಚಂದ್ರಯಾನ-4 ಮಿಷನ್, ಚಂದ್ರನ ಮೇಲೆ ಇಳಿಯುವ ತಂತ್ರಜ್ಞಾನಗಳನ್ನು ಪ್ರದರ್ಶಿಸುವ, ಮಾದರಿಗಳನ್ನು ಸಂಗ್ರಹಿಸುವ ಮತ್ತು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಗುರಿಯನ್ನು ಹೊಂದಿರುವ ಚಂದ್ರನ ಪರಿಶೋಧನಾ ಯೋಜನೆಯಾಗಿದೆ. ಭಾರತವು ಇಲ್ಲಿಯವರೆಗೆ ಮೂರು ಚಂದ್ರಯಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಚಂದ್ರಯಾನ-1 ಅನ್ನು 2008ರಲ್ಲಿ ಉಡಾವಣೆ ಮಾಡಲಾಯಿತು. ಇದು ಚಂದ್ರನ ಸುತ್ತ ಸುತ್ತುತ್ತಿರುವಾಗ ಚಂದ್ರನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿತು. ಇದರ ನಂತರ ಚಂದ್ರಯಾನ-2 ಅನ್ನು 2019ರಲ್ಲಿ ಪ್ರಾರಂಭಿಸಲಾಯಿತು ಆದರೆ ಈ ಮಿಷನ್ ವಿಫಲವಾಯಿತು.
ಬಳಿಕ ಚಂದ್ರಯಾನ-3 ಮಿಷನ್ 2023ರಲ್ಲಿ ಯಶಸ್ವಿಯಾಯಿತು. ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದಾಗ ಅದು ಚಂದ್ರನ ಮೇಲ್ಮೈ ಮಾದರಿಗಳನ್ನು ವಿಶ್ಲೇಷಿಸಿ ಅಲ್ಲಿಂದ ಅದರ ಡೇಟಾವನ್ನು ಕಳುಹಿಸಿತು. ಈಗ ಚಂದ್ರಯಾನ-4 ಮಿಷನ್ ಅದಕ್ಕಿಂತ ಒಂದು ಹೆಜ್ಜೆ ಮುಂದಿರಲಿದೆ. ಇದರಲ್ಲಿ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಲಾಗುವುದು. ಅಲ್ಲಿಂದ ಅದು ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂತಿರುಗುತ್ತದೆ.(ಏಜೆನ್ಸೀಸ್)
ಪಂಜಾಬ್ ಕಿಂಗ್ಸ್ನ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ನೇಮಕ; ಈ ಕುರಿತು ಪಂಟರ್ ಹೇಳಿದಿಷ್ಟು..