ಪಂಜಾಬ್ ಕಿಂಗ್ಸ್​​ನ ಮುಖ್ಯ ಕೋಚ್​​ ಆಗಿ ರಿಕಿ ಪಾಂಟಿಂಗ್ ನೇಮಕ; ಈ ಕುರಿತು ಪಂಟರ್​ ಹೇಳಿದಿಷ್ಟು..

Untitled-design-2024-09-18T173339.296
Published on

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ಮುಂಚಿತವಾಗಿ ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ ಅವರನ್ನು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಏಳು ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್​​​ ಫ್ರಾಂಚೈಸಿಯ ಭಾಗವಾಗಿದ್ದ ರಿಕಿ ಪಾಂಟಿಂಗ್ ಎರಡು ತಿಂಗಳ ಹಿಂದೆ ಆ ಸ್ಥಾನವನ್ನು ತೊರೆದಿದ್ದರು.

ಐಪಿಎಲ್ 2025ರ ಮೊದಲು ಮೆಗಾ ಹರಾಜು ನಡೆಯಲಿದೆ. ಇದರಲ್ಲಿ ಪಂಜಾಬ್ ಕಿಂಗ್ಸ್ ಜತೆ ಪಾಂಟಿಂಗ್ ಇರಲಿದ್ದಾರೆ. ಕೋಚಿಂಗ್ ಸಿಬ್ಬಂದಿಯ ಅಂತಿಮ ನಿರ್ಧಾರವು ರಿಕಿ ಪಾಂಟಿಂಗ್ ಅವರದ್ದಾಗಿದೆ. ಕಳೆದ ಐಪಿಎಲ್​​ನಲ್ಲಿ ಟ್ರೆವರ್ ಬೇಲಿಸ್ ಪಿಬಿಕೆಎಸ್​​ ತಂಡದ ಮುಖ್ಯ ಕೋಚ್ ಆಗಿದ್ದರು. ಪ್ರೀತಿ ಜಿಂಟಾ ಸಹ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ರಿಕ್ಕಿ ಪಾಂಟಿಂಗ್​​, ನನಗೆ ಈ ಜವಾಬ್ದಾರಿ ನೀಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹೊಸ ಸವಾಲಿನ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ನಾನು ತಂಡದ ಮ್ಯಾನೇಜ್‌ಮೆಂಟ್ ಮತ್ತು ಮಾಲೀಕರೊಂದಿಗೆ ಮಾತನಾಡಿದ್ದೇನೆ. ತಂಡವನ್ನು ಮುನ್ನಡೆಸುವುದು ನಮ್ಮೆಲ್ಲರ ಗುರಿಯಾಗಿದೆ. ನಮ್ಮನ್ನು ನಿರಂತರವಾಗಿ ಬೆಂಬಲಿಸಿದ ಎಲ್ಲಾ ಅಭಿಮಾನಿಗಳನ್ನು ನಾವು ಅಭಿನಂದಿಸಲು ಬಯಸುತ್ತೇವೆ. ಮುಂದಿನ ಸರಣಿಯಲ್ಲಿ ಬದಲಾದ ಪಂಜಾಬ್ ಕಿಂಗ್ಸ್ ತಂಡವನ್ನು ನೀವು ನೋಡುತ್ತೀರಿ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನ ದಾಖಲೆ ವಿಶೇಷವೇನಲ್ಲ. ಡೆಲ್ಲಿಯಂತೆ ಪಂಜಾಬ್ ತಂಡವೂ ಒಂದೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ಏಳು ಸರಣಿಯಲ್ಲಿ ಪಾಂಟಿಂಗ್ ಪಂಜಾಬ್ ತಂಡದ ಆರನೇ ಮುಖ್ಯ ಕೋಚ್ ಆಗಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪಂಜಾಬ್ ತಂಡ ಕೇವಲ ಎರಡು ಬಾರಿ ಮಾತ್ರ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಕಳೆದ 10 ವರ್ಷಗಳಿಂದ ಪ್ಲೇ ಆಫ್ ತಲುಪಲು ಸಾಧ್ಯವಾಗಿಲ್ಲ

ಪಾಂಟಿಂಗ್ ಅವರ IPL​​ ಪ್ರಯಾಣವು ಕೋಲ್ಕತ್ತಾ ನೈಟ್ ರೈಡರ್ಸ್, ನಂತರ ಮುಂಬೈ ಇಂಡಿಯನ್ಸ್ ಆಟಗಾರರಾಗಿ ಪ್ರಾರಂಭವಾಯಿತು. ಮುಂಬೈ ಇಂಡಿಯನ್ಸ್ ತಂಡದ ನಾಯಕರೂ ಆಗಿದ್ದಾರೆ. ನಂತರ ಅವರನ್ನು ಅಲ್ಲಿಯೇ ತರಬೇತುದಾರರನ್ನಾಗಿ ಮಾಡಲಾಯಿತು. 2018 ರಿಂದ 2023ರವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಮುಖ್ಯ ತರಬೇತುದಾರರಾಗಿ ಪಾಂಟಿಂಗ್ ತಂಡವನ್ನು ಸತತ ಮೂರು ಪ್ಲೇಆಫ್‌ಗಳಿಗೆ ಮುನ್ನಡೆಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net