ಗಾಂಧಿನಗರ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಬಳಿಕ ವೈದ್ಯಾಧಿಕಾರಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿರುವುದು ಗೊತ್ತೆ ಇದೆ. ಈ ಬಿಸಿ ಚರ್ಚೆಯ ನಡುವೆ ಐಸಿಯುವಿನಲ್ಲಿ ವೈದ್ಯರ ಮೇಲೆ ಕುಟುಂಬವೊಂದರ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಗುಜರಾತಿನ ಭಾವನಗರದ ಸಿಹೋರ್‌ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿ: ಭಾರತದ ಭಾಷೆ ಹಿಂದಿ.. ಕನ್ನಡ ಮಾತಾಡೋಲ್ಲ; ಟೋಲ್ ಸಿಬ್ಬಂದಿ ಕಿರಿಕ್ ಬಳಿಕ ಏನಾಯ್ತು ನೀವೆ ನೋಡಿ..
ತಲೆಗೆ ಪೆಟ್ಟು ಬಿದ್ದಿದ್ದ ಮಹಿಳೆಗೆ ಚಿಕಿತ್ಸೆ ನೀಡಿಸುವ ಸಲುವಾಗಿ ಕುಟುಂಬದವರು ಆಸ್ಪತ್ರೆಗೆ ಬಂದಿದ್ದರು. ಐಸಿಯು ಒಳಗೆ ಪ್ರವೇಶಿಸಿದ ವೈದ್ಯರು ರೋಗಿಯ ಕುಟುಂಬದ ಸದಸ್ಯರಿಗೆ ಚಪ್ಪಲಿಯನ್ನು ಹೊರಬಿಡುವಂತೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಕುಟುಂಬದ ಸದಸ್ಯರು ಜಗಳದಿಂದ ಆರಂಭಿಸಿ ವೈದ್ಯರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ತುರ್ತು ಚಿಕಿತ್ಸೆ ವಿಭಾಗದಲ್ಲಿನ ಸಿಸಿಟಿವಿಯಲ್ಲಿ ಥಳಿತದ ದೃಶ್ಯ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಹಿಳೆಯೊಬ್ಬರು ಮಲಗಿದ್ದಾರೆ. ಅವರ ಪಕ್ಕದಲ್ಲಿ ಪುರುಷರು ನಿಂತಿದ್ದಾರೆ. ನಂತರ ವೈದ್ಯ ಜೈದೀಪ್‌ಸಿನ್ಹ್ ಗೋಹಿಲ್ ಐಸಿಯು ಕೊಠಡಿಗೆ ಪ್ರವೇಶಿಸುತ್ತಾರೆ. ಕುಟುಂಬದ ಸದಸ್ಯರಿಗೆ ಪಾದರಕ್ಷೆಗಳನ್ನು ಹೊರಬಿಡುವಂತೆ ಹೇಳುತ್ತಾರೆ. ಮಾತಿನ ಬದಲಿಗೆ ಜಗಳ ಆಡಲು ಆರಂಭಿಸಿದ ಕುಟಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸುತ್ತಾರೆ.
ಹಾಸಿಗೆಯ ಮೇಲೆ ಮಲಗಿದ್ದ ಮಹಿಳೆ ಮತ್ತು ಅಲ್ಲಿದ್ದ ನರ್ಸಿಂಗ್ ಸಿಬ್ಬಂದಿ ಜಗಳ ಬಿಡಿಸಲು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಾರೆ. ಆದರೆ ಕುಟಂಬಸ್ಥರು ವೈದ್ಯರಿಗೆ ಕೆಳಗ ಬೀಳಿಸಿ ಥಳಿಸುವುದನ್ನು ನಿಲ್ಲಿಸುವುದಿಲ್ಲ. ಅಲ್ಲಿದ್ದ ಔಷಧಗಳು ಹಾಗೂ ಇತರೆ ಉಪಕರಣಗಳಿಗೂ ಕೆಳಗೆ ಬೀಳುವುದನ್ನು ನಾವು ನೋಡಬಹುದು.
ದಾಳಿಯಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಹಿರೇನ್ ದಂಗರ್, ಭಾವದೀಪ್ ದಂಗರ್ ಮತ್ತು ಕೌಶಿಕ್ ಕುವಾಡಿಯಾ ಅವರನ್ನು ಸೆಕ್ಷನ್ 115 (2) (ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ದೇಶದಿಂದ ಕೃತ್ಯ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್)
7 ಅಡಿ ಉದ್ದದ ಹಾವನ್ನು ಹಿಡಿದಿಟ್ಟುಕೊಂಡಿರುವ ಚೇಳು; ದೃಶ್ಯ ನೋಡಿದ್ರೆ ಆಶ್ಚರ್ಯ ಆಗೋದು ಗ್ಯಾರಂಟಿ