ಬಿಹಾರದಲ್ಲಿ ನಡೆಯುತ್ತಿರುವ SIR, ಮತದಾರರ ಸ್ನೇಹಿ ಎಂದ ಸುಪ್ರೀಂ| Supreme Court

Supreme Court 13,08,2025
Published on

Supreme Court: ಬಿಹಾರದಲ್ಲಿ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಸ್ನೇಹಿ ಎಂದು ಸುಪ್ರೀಂ ಕೋರ್ಟ್ ಬುಧವಾರ (ಆಗಸ್ಟ್​,13) ಹೇಳಿದೆ.

ಎಸ್‌ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಹೇಳಿರುವ ಪ್ರಕಾರ, ಚುನಾವಣಾ ಆಯೋಗವು ಗುರುತಿನ ದಾಖಲೆಗಳ ಸಂಖ್ಯೆಯನ್ನು ವಿಸ್ತರಿಸುತ್ತಿದೆ. ನಿಮ್ಮ ಮತದಾರರನ್ನು ಹೊರಗಿಡುವ ವಾದವು ಆಧಾರ್‌ಗೆ ಸಂಬಂಧಿಸಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ಈ ಪರಿಷ್ಕರಣೆಯಲ್ಲಿ ಅನುಸರಿಸಿದ ದಾಖಲೆಗಳ ವಿಸ್ತರಣೆಯು ವಾಸ್ತವವಾಗಿ ಮತದಾರರ ಸ್ನೇಹಿಯಾಗಿದೆ ಮತ್ತು ಮತದಾರರ ಹೊರಗಿಡುವಂತಿಲ್ಲ. ಇದು ನಿಮಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.

ಅಲ್ಲದೆ, ಇದರಲ್ಲಿ 2003ರಲ್ಲಿ 7 ವಿಷಯಗಳಿದ್ದವು. ಈಗ ನೀವು ನಿಮ್ಮನ್ನು ನಾಗರಿಕ ಎಂದು ಗುರುತಿಸಿಕೊಳ್ಳಲು 11 ವಿಷಯಗಳಿವೆ ಎಂದು ನ್ಯಾಯಾಧೀಶರು ಹೇಳಿದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಈ ಪ್ರಕ್ರಿಯೆಯು ಮತದಾರರನ್ನು ಹೊರಗಿಡುವ ಪ್ರಕ್ರಿಯೆಯಾಗಿದೆ ಎಂದು ವಾದಿಸಿದಾಗ ನ್ಯಾಯಾಲಯವು ಹೀಗೆ ಹೇಳಿದ್ದಾರೆ. ಆದಾಗ್ಯೂ, ಸಿಂಘ್ವಿ ಅದು ಹಾಗೆಯೇ ಇದೆ ಎಂದು ಒತ್ತಾಯಿಸುತ್ತಲೇ ಇದ್ದರು.

ಸೋಮವಾರ ಸುಪ್ರೀಂ ಕೋರ್ಟ್, ಸಂಭಾವ್ಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಕೇಲವು ನಾಗರಿಕರು ಎಂದು ಘೋಷಣೆಯ ನಿಯಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು. ಆದರೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ನಾಗರಿಕನನ್ನು ಸೇರಿಸಲು ಅಥವಾ ನಾಗರಿಕರಲ್ಲದವರನ್ನು ಅದರಿಂದ ಹೊರಗಿಡಲು ನಿರ್ಧರಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಪೌರತ್ವದ ಸ್ವಯಂ ಘೋಷಣೆ ಕಾನೂನು ತೊಡಕುಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.

ಪೌರತ್ವವನ್ನು ನಿರ್ಧರಿಸುವುದು ಚುನಾವಣಾ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಿಂಘ್ವಿ ಅವರ ವಾದಕ್ಕೆ ಸುಪ್ರೀ ಉತ್ತರ ನೀಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net