ಸಮನ್ಸ್, ನೋಟಿಸ್ ತಲುಪಿಸಲು ವಾಟ್ಸ್‌ಆ್ಯಪ್‌ಗೂ ಸುಪ್ರೀಂಕೋರ್ಟ್ ಮಾನ್ಯತೆ

Supreme-Court
Published on

ನವದೆಹಲಿ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋರ್ಟ್‌ಗಳು ಸಮನ್ಸ್ ಮತ್ತು ನೋಟಿಸ್‌ಗಳನ್ನು ಇಮೇಲ್, ವಾಟ್ಸ್‌ಆ್ಯಪ್ ಮೂಲಕವೂ ಕಳುಹಿಸಬಹುದು. ಇದಕ್ಕೆ ಭೌತಿಕವಾಗಿ ಕಳುಹಿಸುವ ಸಮನ್ಸ್ ಮತ್ತು ನೋಟಿಸ್‌ಗೆ ಇರುವಷ್ಟೆ ಮಾನ್ಯತೆ ಇದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

‘ಕರೊನಾ ಹಿನ್ನೆಲೆಯಲ್ಲಿ ಈಗ ಅಂಚೆ ಕಚೇರಿಗೆ ಹೋಗುವುದಕ್ಕೆ ಆಗುವುದಿಲ್ಲ. ಹೀಗಾಗಿ ಇದನ್ನು ಇಮೇಲ್ ಇಲ್ಲವೆ ವಾಟ್ಸ್‌ಆ್ಯಪ್ ಸೇರಿದಂತೆ ಇತರ ವರ್ಚುವಲ್ ಮಾಧ್ಯಮದ ಮೂಲಕವೂ ಕಳುಹಿಸಬಹುದು’ ಎಂದು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನೇತೃತ್ವದ ನ್ಯಾಯಪೀಠ ಹೇಳಿದೆ. ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಬಗ್ಗೆ ಕಿಚ್ಚ ಸುದೀಪ್​ ಕಡೆಯಿಂದ ಬಂತು ಉತ್ತರ!

ಸಂಬಂಧಿಸಿದ ವ್ಯಕ್ತಿಗೆ ಈ ಸಮನ್ಸ್ ಅಥವಾ ನೋಟಿಸ್ ತಲುಪಿದೆ ಎನ್ನುವುದಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಮೂಡುವ ಎರಡು ನೀಲಿ ರೈಟ್ ಮಾರ್ಕ್‌ಗಳೇ ಪುರಾವೆ ಎಂದು ಪೀಠ ತಿಳಿಸಿದೆ. ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಸಮನ್ಸ್/ನೋಟಿಸ್ ತಲುಪಿಲ್ಲವೆಂದು ಕಲಾಪ ಮುಂದೂಡುವುದು ತಪ್ಪುತ್ತದೆ. ಕಲಾಪ ಚುರುಕಿನಿಂದ ನಡೆಯಲು ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net