More

    ಅಪ್ಪಟ ಕನ್ನಡಿಗರಲ್ಲಿ ಕ್ಷಮೆ ಕೋರಿದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ…

    ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ನಯನಾ, ಫೇಸ್​ಬುಕ್​ನಲ್ಲಿ ಕನ್ನಡದ ವಿಚಾರಕ್ಕೆ ಸಖತ್​ ಟ್ರೋಲ್​ಗೆ ಒಳಗಾಗಿದ್ದರು. ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅದೆಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ. ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಜತೆಗೆ ಅದಕ್ಕೊಂದಿಷ್ಟು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ.

    ಈ ಬಗ್ಗೆ ವಿಡಿಯೋವೊಂದನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಅವರು, ನಾನು ಯಾವುದೇ ಚಾನೆಲ್‌ಗೆ ಹೋದರೂ, ಸಿನಿಮಾಗಳಲ್ಲಿ ಆ್ಯಕ್ಟ್​ ಮಾಡಿದಾಗಲೂ ನಾನು ಇಂಗ್ಲಿಷ್‌ನವಳು, ಇಂಗ್ಲಿಷ್ ವ್ಯಾಮೋಹ ಜಾಸ್ತಿ ಎಂದು ಹೇಳಿಕೊಂಡಿಲ್ಲ. ನಾವು ಕನ್ನಡಿಗರು, ನಮಗೆ ನಮ್ಮ ಬೆಲೆ ಏನು ಎಂದು ಚೆನ್ನಾಗಿ ಗೊತ್ತು. ಎಲ್ಲಿ ಅದನ್ನು ಬಳಸಬೇಕು ಎಂದು ಗೊತ್ತಿದೆ. ಕನ್ನಡವನ್ನು ಅವಶ್ಯಕತೆ ಎಂದು ಬಳಸಿಲ್ಲ. ಅದನ್ನು ಅಧಿಕಾರ ಎಂದೇ ಬಳಸಿದ್ದೇವೆ. ಆ ಕಾಮೆಂಟ್ ಹಾಕಿದ್ದು ವೈಯಕ್ತಿಕವಾಗಿ ಬೇಸರ ಅನಿಸಿತು. ಅದಕ್ಕಾಗಿ ಅವರಿಗೆ ಅಪ್ಪಟ ಕನ್ನಡ ಅಭಿಮಾನಿ ಮುಚ್ಕೊಂಡು ನಿನ್ನ ಕೆಲಸ ನೋಡು ಎಂದು ಹಾಕಿದ್ದೇ ಹೊರತು ಅವರು ಕನ್ನಡದ ಅಭಿಮಾನಿ ಎಂದು ಅಲ್ಲ. ಕ್ರೇಜ್​ಗೋಸ್ಕರ್​ ಈ ರೀತಿ ಮಾಡಿರಬಹುದು ಎಂದೆನಿಸಿತು. ಆತನೂ ಕನ್ನಡದಲ್ಲಿಯೇ ಅದನ್ನು ಕಮೆಂಟ್​ ಮಾಡಿದ್ದರೆ, ನಾನೂ ಅವನು ಕನ್ನಡ ಅಭಿಮಾನಿ ಎಂದು ಒಪ್ಪಿಕೊಳ್ಳುತ್ತಿದೆ.

    ಇದನ್ನೂ ಓದಿ: ಸುಶಾಂತ್ ಸಾವಿನ ಹಿಂದೆ ದಾವೂದ್ … ಮಾಜಿ ರಾ ಅಧಿಕಾರಿ ಬಿಚ್ಚಿಟ್ಟ ರೋಚಕ ಮಾಹಿತಿ

    ಜತೆಗೆ ಫೇಸ್​ಬುಕ್​ ಬಳಕೆದಾರರಿಗೂ ಮನವಿ ಮಾಡಿರುವ ನಯನಾ, ‘ದಯವಿಟ್ಟು ದುರಹಂಕಾರ, ಕೊಬ್ಬು ಜಾಸ್ತಿ ಎಂಬೆಲ್ಲ ಪದ ಪ್ರಯೋಗ ಮಾಡಬೇಡಿ. ನೀವು ಹೇಳುವಂತೆ ನಾನು ಆ ಥರ ಇಲ್ಲ. ನನ್ನಂತೆ ನಿಮ್ಮ ಮನೆಯಲ್ಲಿಯೂ ಹೆಣ್ಣುಮಕ್ಕಳಿರುತ್ತಾರೆ. ಮತ್ತೆ ಕನ್ನಡದ ಬಗ್ಗೆ ನಾನು ಇಲ್ಲಿಯವರೆಗೂ ಏನೂ ಮಾತನಾಡಿಲ್ಲ. ಕನ್ನಡವನ್ನು ನಿರ್ಲಕ್ಷ ಮಾಡಿದ್ದೀನಿ ಎನ್ನುತ್ತಿದ್ದರೆ ಸೂಕ್ತ ಸಾಕ್ಷ್ಯ ನೀಡಿ. ಈ ಮೂಲಕ ನನ್ನಿಂದ ಏನಾದರೂ ತಪ್ಪಾದರೆ ಕನ್ನಡದ ಅಪ್ಪಟ ಅಭಿಮಾನಿಗಳಿಗೆ ಕ್ಷಮೆ ಕೋರುತ್ತಿದ್ದೇನೆ. ಬೈಗುಳಗಳ ಮೂಲಕ ಕಮೆಂಟ್​ ಮಾಡಿದವರಿಗೆ ಬೇರೆ ರೀತಿಯಲ್ಲಿ ಉತ್ತರ ನೀಡಲಿದ್ದೇನೆ’ ಅಂತಲೂ ಹೇಳಿಕೊಂಡಿದ್ದಾರೆ ನಯನಾ.

    ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಬಗ್ಗೆ ಕಿಚ್ಚ ಸುದೀಪ್​ ಕಡೆಯಿಂದ ಬಂತು ಉತ್ತರ!

    ಅಂದಹಾಗೆ, ಫೋಟೋವೊಂದಕ್ಕೆ ಇಂಗ್ಲಿಷ್​ನಲ್ಲಿ ಕ್ಯಾಪ್ಶನ್​ ಬರೆದಿದ್ದಕ್ಕೆ ಒಂದಷ್ಟು ನೆಟ್ಟಿಗರು, ಕನ್ನಡದಲ್ಲಿಯೇ ಕಮೆಂಟ್​ ಮಾಡುವಂತೆ ಕೋರಿದ್ದರು. ಪ್ರತಿಯಾಗಿ, ‘ಫೇಮಸ್​ ಆಗೋತನ ಕನ್ನಡ ಬೇಕು. ಆದಮೇಲೆ ಇಂಗ್ಲಿಷ್​’ ಎಂಬ ಕಮೆಂಟ್​ಗೆ ‘ಅಪ್ಪ ಕನ್ನಡದ ಭಕ್ತ, ಮುಚ್ಕೊಂಡು ನಿನ್​ ಕೆಲ್ಸ ನೋಡ್ಕೊ’ ಎಂದು ನಯನಾ ಪ್ರತಿಕ್ರಿಯಿಸಿದ್ದರು. ಅವರು ಹಾಗೆ ಉತ್ತರಿಸುತ್ತಿದ್ದಂತೆ ಸಾಕಷ್ಟು ಮಂದಿ ನಯನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

    ಎಲ್ಲರಿಗೂ ನಮಸ್ಕಾರ ಈ ವೀಡಿಯೋ ಅಪ್ಪಟ ಕನ್ನಡ ಅಭಿಮಾನಿಗಳಿಗೆ…..ಈ ಮುಂಚೆ ನಾನು ಕನ್ನಡದಲ್ಲಿ ಸಾಲುಗಳನ್ನ ಹಾಕಿದಾಗ ಒಬ್ಬ ವ್ಯಕ್ತಿ ಅವ್ಯಾಚ್ಯ ಶಬ್ದ ಬಳಕೆ ಮಾಡಿದರು ನಿನಗೆ ಕೊಬ್ಬು ದುರಂಕರ ಅಂತ ಅದನ್ನ ಒಂದಷ್ಟು ಜನ ದುರುಪಯೋಗ ಪಡಿಸಿಕೊಂಡು ಅವರುಗಳು ಕೂಡ ಕೆಟ್ಟ ಪದಬಳಕೆ ಮಾಡಿದ್ದರೂ,, ನಾನು ಯಾವುದೇ ಪೋಸ್ಟ್ ಹಾಕಿದರು ಕೂಡ ಆ ತರಹದ ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದವು ನಾನು ತುಂಬಾ ದಿನಗಳಿಂದ ಗಮನಿಸುತ್ತಾ ಇದ್ದೆ ,, ನನ್ನ ತಾಳ್ಮೆಗೂ ಮಿತಿಯಿದೆ ಅಲ್ಲವೆ ನಾನು ಆ ವ್ಯಕ್ತಿಗೆ ಅದನ್ನು ಹೇಳಿರುವುದೆ ವಿನಹ ಅವರು ಕನ್ನಡದ ಅಭಿಮಾನಿ ಎಂದು ಅಥವಾ ಕನ್ನಡ ಭಾಷೆ ಬಗ್ಗೆಯಾಗಲಿ ನಾನು ಮಾತನಾಡಲಿಲ್ಲ,, ನಾನು ಎಲ್ಲಿಯೂ ಯಾವುದೇ ಕಾರ್ಯಕ್ರಮಗಳಲ್ಲಿಯೂ ಕೂಡ ಕನ್ನಡ ಭಾಷೆ ಕನ್ನಡದ ಅಭಿಮಾನಗಳ ಬಗ್ಗೆ ಕೀಳಾಗಿ ಮಾತನಾಡಿದವಳು ಅಲ್ಲಾ ,,ನಮ್ಮ ಕನ್ನಡವನ್ನು ಎಲ್ಲಾ ಕಡೆಯೂ ನಾವು ಬೆಳೆಸಬೇಕು ಅನ್ನೊ ಕೆಲಸ ಮಾಡಬೇಕೆ ಹೊರೆತು ವ್ಯಕ್ತಿಗೆ ಹೇಳಿದನ್ನ ಕನ್ನಡ ಭಾಷೆಗೆ ಹೇಳಿದೀನಿ ಎಂದು ಹೇಳುವುದು ತಪ್ಪಾಗಿ ಕಾಣಿಸುತ್ತೆ ..ಆದರೆ ಕೆಲವರು ಕನ್ನಡ ಅಭಿಮಾನಿಗಳು ಎಂದು ಹೇಳಿ ಒಬ್ಬ ಹೆಣ್ಣಿಗೆ ಉಪಯೋಗಿಸಿರುವ ಪದಬಳಕೆ ಮೇಲೆ ಕೂಡ ಗಮನವಿರಲಿ ಅದರಲ್ಲಿ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ .ನಮಸ್ಕಾರಗಳೊಂದಿಗೆ ನಯನಶರತ್

    Posted by Nayana Comedy Khiladigalu on Friday, July 10, 2020

    ಟ್ರೋಲ್​ಗೆ ಆಹಾರವಾದ್ರು ಕಾಮಿಡಿ ಕಿಲಾಡಿ ನಯನಾ; ಫೇಸ್​ಬುಕ್​ನಲ್ಲಿ ಹಿಗ್ಗಾಮುಗ್ಗಾ ತರಾಟೆ

    ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಮೌನ ಮುರಿದ ಸುದೀಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts