ಬಾಕ್ಸ್ ಆಫೀಸ್​ನಲ್ಲಿ 'ಜೈಲರ್' ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ

Untitled design - 2023-08-11T182216.390
Published on

ಭಾರತ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​, ರಜನಿಕಾಂತ್ ಅಭಿನಯದ 'ಜೈಲರ್'​ ಚಿತ್ರ ಆಗಸ್ಟ್​ 10 ರಂದು ಬಿಡುಗಡೆಗೊಂಡು ಬಾಕ್ಸ್ ಆಫೀಸ್​ ಅನ್ನು ಧೂಳಿಪಟ ಮಾಡುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ನುಗ್ಗುತ್ತಿರುವ ರಜನಿಕಾಂತ್ ಫ್ಯಾನ್ಸ್​, ತಮ್ಮ ನೆಚ್ಚಿನ ನಟನ ನಟನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ತಲೈವಾ ತಮ್ಮ ಸ್ನೇಹಿತರೊಡನೆ ಹಿಮಾಲಯಕ್ಕೆ ಭೇಟಿ ನೀಡಿರುವ ಫೋಟೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಹಿಮಾಲಯಕ್ಕೆ ಭೇಟಿ ನೀಡಿದ ತಲೈವಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಫೋಟೊದಲ್ಲಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ರಜನಿಕಾಂತ್​ ಅವರು ಬಿಳಿ ಕುರ್ತಾ ಮತ್ತು ಪೈಜಾಮ ಧರಿಸಿರುವುದು ಕಾಣಬಹುದು. ಜಗತ್ತಿನೆಲ್ಲೆಡೆ ಅಭಿಮಾನಿಗಳು ಸೂಪರ್​​ಸ್ಟಾರ್​ ನಟನೆಯ 'ಜೈಲರ್'​ ಚಿತ್ರವನ್ನು ಸಂಭ್ರಮಿಸುತ್ತಿದ್ದು, ಈ ಸಕ್ಸಸ್​ ಬೆನ್ನಲ್ಲೇ ನಟ ಹಿಮಾಲಯಕ್ಕೆ ಭೇಟಿ ನೀಡಿದ್ದಾರೆ.

ಜೈಲರ್ ಸಿನಿಮಾವನ್ನು ಆಗಸ್ಟ್​ 10 ರಂದು ರಿಲೀಸ್ ಮಾಡಲಿದ್ದೇವೆ ಎಂದು ಚಿತ್ರತಂಡ ಈ ಹಿಂದೆಯೇ ದಿನಾಂಕವನ್ನು ನಿಗದಿಪಡಿಸಿತ್ತು. ಆದ್ರೆ, ಬಿಡುಗಡೆಗೂ ಮುನ್ನವೇ ರಜನಿಕಾಂತ್​ ಅವರು ಹಿಮಾಲಯಕ್ಕೆ ಭೇಟಿ ನೀಡಲು ಆಗಸ್ಟ್​ 09 ರಂದು ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೆಲ್ಫಿಗಾಗಿ ಮುಗಿಬಿದ್ದರು. ತಮ್ಮ ಫ್ಯಾನ್ಸ್​ಗೆ ಬೇಸರವಾಗದಂತೆ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿದ  ರಜನಿಕಾಂತ್,​ ತದನಂತರ ಸ್ಥಳದಿಂದ ತೆರಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net