VIDEO| ಮೊಸಳೆಯನ್ನು ಎಳೆದಾಡಿದ ನೀರಾನೆ ಗುಂಪು!; ವಿಡಿಯೋ ವೈರಲ್​

Untitled design - 2023-08-11T173536.472
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ನಡೆಯುವ ವಿಭಿನ್ನ, ವಿಚಿತ್ರ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ, ವ್ಯಾಪಕವಾಗಿ ವೈರಲ್ ಆಗುವ ಮುಖೇನ ನೆಟ್ಟಿಗರನ್ನು ಸೆಳೆಯುತ್ತಿದೆ. ಈ ಪೈಕಿ ನದಿಯಲ್ಲಿದ್ದ ಅಪಾರ ಸಂಖ್ಯೆಯ ನೀರಾನೆಗಳು ಏಕಾಏಕಿ ಮೊಸಳೆಯ ಮೇಲೆ ದಾಳಿ ಮಾಡಿರುವ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲಿ ಬೃಹತ್ ಸಂಖ್ಯೆಯಲ್ಲಿ ನದಿಯೊಳಗಿದ್ದ ನೀರಾನೆಗಳು, ಆಕ್ರಮಣಕಾರಿ ಮೊಸಳೆಯನ್ನು ಗುರಿಯಾಗಿಸಿಕೊಂಡು, ಬಾಯಲ್ಲಿ ಕಚ್ಚಿ ಎಳೆದಾಡಿದ ದೃಶ್ಯ ನೆಟ್ಟಿಗರ ಎದೆ ಝಲ್​ ಎನ್ನಿಸುವಂತಿದೆ.

ತನ್ನ ಭೇಟೆಗಾಗಿ ನೀರಿನಡಿ ಸದ್ದಿಲ್ಲದೆ ಕಾದು ಕೂರುವ ಮೊಸಳೆಯು ನೀರಾನೆಗಳ ಮಧ್ಯೆ ಸಿಲುಕಿ ಒದ್ದಾಡಿದ ದೃಶ್ಯ ನೋಡುಗರನ್ನು ಅಶ್ಚರ್ಯಚಕಿತರನ್ನಾಗಿ ಮಾಡಿದೆ. ಈ ಕ್ಲಿಪ್​ ಅನ್ನು 'ವೈಲ್ಡ್​ಲೈಫ್​ಮೋರ್'​ ಎಂಬ ಇನ್​ಸ್ಟಾಗ್ರಾಮ್​ ಖಾತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಭಾರೀ ವೈರಲ್​ ಆಗಿದೆ. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net