

ಅಮೃತಸರ: ತನ್ನ 20 ವರ್ಷದ ಪುತ್ರಿ ಮನೆಯಲ್ಲಿ ಯಾರಿಗೂ ತಿಳಿಸದೆ ಹೊರಹೋಗಿದ್ದಳು ಎಂಬ ಕಾರಣಕ್ಕೆ ಕುಪಿತಗೊಂಡ ತಂದೆ, ಆಕೆಯನ್ನು ಅಮಾನುಷವಾಗಿ ಹತ್ಯೆಗೈದು, ಮೃತದೇಹವನ್ನು ಬೈಕ್ನ ಹಿಂಬದಿಗೆ ಕಟ್ಟಿ ಎಳೆದೊಯ್ದ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ಘಟನೆಯ ವಿವರ: ಮುಚ್ಚಲ್ ಎಂಬ ಗ್ರಾಮದಲ್ಲಿ ವಾಸವಿದ್ದ ಬಾವ್ ಎಂಬ ವ್ಯಕ್ತಿ ತನ್ನ ಮಗಳು ಬುಧವಾರ ಮನೆಯಲ್ಲಿ ತಾನು ಹೊರಗೆ ಹೋಗುತ್ತಿದ್ದೇನೆ ಎಂದು ಯಾರಿಗೂ ಹೇಳದೆ ಹೋದ ವಿಷಯದಿಂದ ತೀವ್ರ ಕುಪಿತಗೊಂಡು, ಗುರುವಾರ ಪುತ್ರಿ ಮನೆಗೆ ಹಿಂದಿರುಗಿದ ವೇಳೆ ಆಕೆಯನ್ನು ಮಾರಾಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ.
ಹತ್ಯೆಗೈದ ಬಳಿಕ ಮಗಳ ಮೃತದೇಹವನ್ನು ತನ್ನ ಬೈಕ್ಗೆ ಕಟ್ಟಿ ಗ್ರಾಮದ ಸುತ್ತಮುತ್ತ ಎಳೆದೊಯ್ದು, ತದನಂತರ ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನು ಇದೀಗ ಬಂಧಿಸಲಾಗಿದೆ ಎಂದು ಡಿಎಸ್ಪಿ ಕುಲದೀಪ್ ಸಿಂಗ್ ಹೇಳಿದ್ದಾರೆ,(ಏಜೆನ್ಸೀಸ್).