More

    1.5 ಲಕ್ಷ ರೂ. ಬೆಲೆ ಬಾಳುವ ಜೋಡೆತ್ತು ಕಳ್ಳತನ; ಖದೀಮರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಹುಡುಕಿಕೊಂಡು ಬಂದ ಜಾಣ ಎತ್ತುಗಳು

    ಯಾದಗಿರಿ: ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೆ ಹುಡುಕಿಕೊಂಡು ರೈತನ ಮನೆ ಮುಂದೆ ಬಂದು ನಿಂತಿವೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.

    ಸಗರ ಗ್ರಾಮದ ರೈತ ತಿರುಪತಿ ಎನ್ನುವವರಿಗೆ ಸೇರಿದ್ದ ಜೋಡೆತ್ತುಗಳನ್ನು ಖದೀಮರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತನಿಗೆ ತನ್ನ ಎತ್ತುಗಳು ಕಾಣದೆ ಇದ್ದಾಗ ಗೋಳಾಡಿದ್ದ. ಬೆನ್ನೆಲುಬಾದ ಎತ್ತುಗಳು ಇಲ್ಲದಕ್ಕೆ ಕಂಗಲಾಗಿ ಕಣ್ಣೀರಿಟ್ಟಿದ್ದ. ನನ್ನ 1.5 ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳು ಕಳೆದಿವೆ ಎಂದು ರೋಧಿಸಿದ್ದ.

    ಗ್ರಾಮಸ್ಥರು ಎತ್ತುಗಳು ಹುಡುಕೋಣ ಎಂದು ರೈತ ತಿರುಪತಿಗೆ ಧೈರ್ಯ ತುಂಬಿದ್ರು, ಕಣ್ಣೀರು ಹಾಕುತ್ತಾ ಎತ್ತುಗಳಿಗಾಗಿ ಕಾಯುತ್ತಾ ಕುಳಿತಿದ್ದ ತಿರುಪತಿ. ಆದರೆ ಅದೇನಾಯ್ತೋ ಗೊತ್ತಿಲ್ಲ ಎತ್ತುಗಳು ಕಳ್ಳರಿಂದ ತಪ್ಪಿಸಿಕೊಂಡು ಸಗರ ಗ್ರಾಮದಲ್ಲಿರುವ ತನ್ನ ಮಾಲೀಕನ ಮನೆಗೆ ಬಂದಿವೆ. ಎತ್ತು ಕಾಣದೆ ಬೇಸರದಿಂದ ಕುಳಿತಿದ್ದ ರೈತನಿಗೆ ಎತ್ತುಗಳು ಕಾಣುತ್ತಿದ್ದಂತೆ ಸಂತೋಷವಾಗಿದೆ. ರೈತ ತಿರುಪತಿ ಮರಳಿ ಬಂದ ಎತ್ತುಗಳ ಮೈ ಸವರಿ ಪ್ರೀತಿ ತೊರಿದ್ದಾರೆ.

    ಹಿರಿಯ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿದ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts