ಫನ್ನಿ ಟಾಸ್ಕ್​ನಲ್ಲಿ ತುಕಾಲಿ ಸಂತೋಷ್​ಗೆ ಹೊಸ ಅನುಭವ; ಒಮ್ಮೆ ವಿಡಿಯೋ ನೋಡಿ

Thukali Santhosh
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪೈಕಿ ತುಕಾಲಿ ಸಂತೋಷ್​ ಅವರು ತಮ್ಮ ಕಾಮಿಡಿ ಟೈಮಿಂಗ್​ ಹಾಗೂ ಮ್ಯಾನರಿಸಂಗೆ ಹೆಚ್ಚು ಖ್ಯಾತಿ ಪಡೆದಿದ್ದು, ವೀಕ್ಷಕರು ಹಾಗೂ ಸ್ಫರ್ಧಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ಟಾಸ್ಕ್​ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ಭಾನುವಾರ ನಟ ಕಿಚ್ಚ ಸುದೀಪ್‌ ನಡೆಸಿ ಕೊಡುವ ಸೂಪರ್​ ಸಂಡೇ ವಿತ್​ ಸುದೀಪದಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಾರೆ. ಅದೇ ರೀತಿ ಸುದೀಪ್​ ಅವರು ಮನರಂಜನೆಗಾಗಿ ಸ್ಪರ್ಧಿಗಳಿಗೆ ಕೆಲವು ಟಾಸ್ಕ್​ಗಳನ್ನು ನೀಡುತ್ತಾರೆ. ಅದೇ ರೀತಿ ಈ ವಾರ ವರ್ತೂರ್​ ಸಂತೋಷ್​ ಅವರಿಗೆ ಕಿಚ್ಚ ಸುದೀಪ್ ಟಾಸ್ಟ್​ ಒಂದನ್ನು ನೀಡಿದ್ದಾರೆ.

ಈ ವಾರದ ಫನ್ನಿ ಟಾಸ್ಕ್​ನಲ್ಲಿ ಕಾರ್ತಿಕ್ ಮಹೇಶ್​ಗೆ ತುಕಾಲಿ ಸಂತೋಷ್​ ಮುತ್ತು ನೀಡಿದ್ದು, ಆ ಸನ್ನಿವೇಶ ಮತ್ತೆ ಮರುಕಳಿಸಿದೆ. ಕಿಚ್ಚ ಸುದೀಪ್​ ಅವರ ಎದುರಲ್ಲೇ ಕಾರ್ತಿಕ್​ ಮಹೇಶ್​ಗೆ ತುಕಾಲಿ ಸಂತೋಷ್​ ಅವರು ಕಿಸ್​ ಮಾಡಿದ್ದಾರೆ. ಮನೆ ಮಂದಿಗೆಲ್ಲ ಕೀಟಲೆ ಮಾಡಿದ ತುಕಾಲಿ ಸಂತೋಷ್​ ಅವರಿಗೆ ಮಹಿಳಾ ಸ್ಫರ್ಧಿಗಳು ತಕ್ಕ ಪಾಠ ಕಲಿಸಿದ್ದಾರೆ.

ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಮ್ರತಾ ಗೌಡ ಮತ್ತು ಸಿರಿ ಅವರು ವ್ಯಾಕ್ಸ್ ಸ್ಟ್ರಿಪ್ಸ್​ ಮೂಲಕ ಸಂತೋಷ್​ ಅವರ ಕಾಲಿನ ಕೂದಲನ್ನು ಕಿತ್ತಿದ್ದಾರೆ. ಹೋಗಿ ಬಂದು ನನ್ನ ಕೂದಲಿಗೆ ಅಟ್ಯಾಕ್​ ಮಾಡ್ತಾರೆ ಎಂದು ತುಕಾಲಿ ಸಂತೋಷ್​ ಗೋಳು ತೋಡಿಕೊಂಡಿದ್ದಾರೆ. ತುಕಾಲಿ ಅವರು ಮಾತನಾಡಬೇಕಾದರೆ ಮನೆಮಂದಿ ನಗೆಗಡಲಲ್ಲಿ ತೇಲಿರುವುದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ.

ವರ್ತೂರ್​ ಸಂತೋಷ್, ಸಿರಿ, ಮೈಕಲ್​ ಹಾಗೂ ತನಿಷಾ ಕುಪ್ಪಂಡ ಎಲಿಮೆನೇಷನ್‌ನಲ್ಲಿ ಇದ್ದಾರೆ. ಈ ವಾರದ ಮನೆಯಿಂದ ಯಾರು ಗೇಟ್‌ ಎಲಿಮಿನೇಟ್ ಆಗಲಿದ್ದಾರಂತೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net