More

    ಮನಮೋಹನ್ ಸಿಂಗ್ ಸಂವೇದನಾಶೀಲ ಪ್ರಧಾನಿಯಾಗಿದ್ದರು, ಆದರೆ ಈಗ: ಶರದ್​ ಪವಾರ್​

    ಮುಂಬೈ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ರೈತರ ಬಗ್ಗೆ ಸಂವೇದನಾಶೀಲರಾಗಿದ್ದರು ಮತ್ತು ಕೆಲವರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಕೆಲಸ ಮಾಡಿದ್ದರು ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಇದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಎನ್​ಸಿಪಿ ವರಿಷ್ಠ ಶರದ್​ ಪವಾರ್​ ಹೇಳಿದ್ದಾರೆ.

    ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜನೆಗೊಂಡಿದ್ದ ಶೆಟ್ಕರಿ ಆಕ್ರೋಶ ಮೋರ್ಚಾದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪವಾರ್ ಇದು ಬರೀ ಪುಣೆಗೆ ಸೀಮಿತವಾಗಬಾರದು ಇಡೀ ದೇಶಕ್ಕೆ ವ್ಯಾಪಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

    ಇದನ್ನೂ ಓದಿ: ವಿರೋಚಿತ ಸೋಲಿನ ನಡುವೆಯೇ ಟೀಂ ಇಂಡಿಯಾಗೆ ಆಘಾತ; ಪ್ರಮುಖ ಆಟಗಾರ್ತಿ ಸರಣಿಯಿಂದ ಔಟ್ ​

    ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮರಾವತಿಗೆ ಭೇಟಿ ನೀಡಿದ್ದು ನನಗೆ ನೆನಪಿದೆ. ರೈತರು ಹಾಗೂ ಜನರ ಬಗ್ಗೆ ಸಿಂಗ್​ ಅವರು ಸಂವೇದನಾಶೀಲರಾಗಿದ್ದರು. ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ 72,000 ಕೋಟಿ ರೂಪಾಯಿ ಮೌಲ್ಯದ ಕೃಷಿ ಸಾಲವನ್ನು ಮನ್ನಾ ಮಾಡಿದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಏನು ನಿರೀಕ್ಷಿಸುವ ಆಗಿಲ್ಲ ಎಂದಿದ್ದಾರೆ.

    ಇವಿಎಂ ಇಲ್ಲದೆ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಅವರು ಗೆಲುವಿಗಾಗಿ ಇವಿಎಂಗಳ ಮೇಲೆ ಅವಲಂಬಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಬಹು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಬಿಜೆಪಿಯ ಪಾಲುದಾರಿಕೆ ಇವಿಎಂ ಜೊತೆಗಿದೆ ಎಂದು ಶರದ್​ ಪವಾರ್​ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts