More

    ವಿರೋಚಿತ ಸೋಲಿನ ನಡುವೆಯೇ ಟೀಂ ಇಂಡಿಯಾಗೆ ಆಘಾತ; ಪ್ರಮುಖ ಆಟಗಾರ್ತಿ ಸರಣಿಯಿಂದ ಔಟ್ ​

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು, ಇದರ ಜೊತೆಗೆ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಟೀಂ ಇಂಡಿಯಾದ ಮಹಿಳಾ ಆಟಗಾರ್ತಿಯೊಬ್ಬರು ಗಾಯಗೊಂಡಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.

    ಟೀಂ ಇಂಡಿಯಾ ಆಟಗಾರ್ತಿ ಸ್ನೇಹ ರಾಣಾ ಅವರು ಫೀಲ್ಡಿಂಗ್​ ಮಾಡುವ ವೇಳೆ ಸಹ ಆಟಗಾರ್ತಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಅವರಿಗೆ ತಲೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ದೂರ ಉಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

    ಇದನ್ನೂ ಓದಿ: ಹೊಸ ವರ್ಷಾಚರಣೆ 2024; ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಹೀಗಿದೆ

    ನಡೆದಿದ್ದೇನು?

    ಆಸ್ಟ್ರೇಲಿಯಾ ಇನ್ನಿಂಗ್ಸ್​ನ 25ನೇ ನಡೆಯುತ್ತಿದ್ದ ವೇಳೆ ಬೆತ್ ಮೂನಿ ಬ್ಯಾಟಿಂಗ್ ಮಾಡುತ್ತಿದ್ದರು ಮತ್ತು ಶ್ರೇಯಾಂಕ ಪಾಟೀಲ್ ಬೌಲಿಂಗ್​ ಮಾಡುತ್ತಿದ್ದರು. ಈ ವೇಳೆ ಬೆತ್​ ಮೂನಿ ಬಾರಿಸಿದ ಚೆಂಡು ಮೇಲ್ಕಕೆ ಹಾರಿದ್ದು, ಇದನ್ನು ಹಿಡಿಯಲು ಪೂಜಾ ವಸ್ತ್ರಕರ್ ಮತ್ತು ಸ್ನೇಹ್ ರಾಣಾ ಮುಂದಾಗಿದ್ದಾರೆ. ಕ್ಯಾಚ್ ಹಿಡಿಯಲು ಯತ್ನಿಸಿದಾಗ ಇಬ್ಬರೂ ಡಿಕ್ಕಿ ಹೊಡೆದಿದ್ದಾರೆ. ಆಗ ರಾಣಾ ತೀವ್ರವಾಗಿ ಗಾಯಗೊಂಡರು. ತಕ್ಷಣವೇ ಫಿಸಿಯೋ ಆಗಮಿಸಿದ್ದು, ಪರೀಕ್ಷಿಸಿ ಡ್ರೆಸ್ಸಿಂಗ್ ರೂಮ್​ಗೆ ಕರೆದುಕೊಂಡು ಹೋಗಿದ್ದಾರೆ. 

    ರಾಣಾ 33ನೇ ಓವರ್‌ನಲ್ಲಿ ಬೌಲಿಂಗ್‌ ಮೂಲಕ ಮರಳಿದರು. ಆದರೆ, ತೀವ್ರವಾಗಿ ತಲೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗೆ ಒಳಗಾಗಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ. ಬದಲಿ ಆಟಗಾರ್ತಿಯಾಗಿ ಹರ್ಲಿನ್​ ಡಿಯೋಲ್​ ಅವರನ್ನು ಹೆಸರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts