

ಮುಂಬೈ: ತನ್ನ ಮೈಮಾಟದ ಮೂಲಕವೇ ಭಾರತ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡಿರುವ ನಟಿ ಸನ್ನಿ ಲಿಯೋನ್ (Sunny Leone) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದು, ನಟಿ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಮುಂಬೈನಲ್ಲಿ 2,100 ಚದರ ಅಡಿ ಜಾಗವನ್ನು ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಸ್ಕ್ವೇರ್ ಯಾರ್ಡ್ಸ್ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿದೆ.
ಕರೆಂಜಿತ್ ಕೌರ್ ವೆಬರ್ (Sunny Leone) ಮುಂಬೈನ ಓಶಿವಾರಾ ಪ್ರದೇಶದಲ್ಲಿ 8 ಕೋಟಿ ರೂ. ಮೌಲ್ಯದ 2,100 ಚದರಿ ಅಡಿ ಜಾಗವನ್ನು ಖರೀದಿಸಿದ್ದಾರೆ. 2025ರಲ್ಲಿ ಸ್ಥಳ ನೋಂದಣಿ ಪ್ರಕ್ರಿಯೆ ನಡೆದಿದ್ದು, ಸನ್ನಿ ಲಿಯೋನ್ ಖರೀದಿಸಿರುವ ಜಾಗವು ಗ್ರೂಪ್ನ ವಾಣಿಜ್ಯ ಯೋಜನೆಯಾದ ವೀರ್ ಸಿಗ್ನೇಚರ್ನಲ್ಲಿದೆ.
ಸನ್ನಿ ಲಿಯೋನ್ ಅವರು ಖರೀದಿಸಿರುವ ಕಚೇರಿಯು 176.98 ಚದರ ಮೀಟರ್ (ಸುಮಾರು 1,904.91 ಚದರ ಅಡಿ) ಕಾರ್ಪೆಟ್ ಏರಿಯಾವನ್ನು ಹೊಂದಿದ್ದು, 194.67 ಚದರ ಮೀಟರ್ (2,095 ಚದರ ಅಡಿ) ಬಿಲ್ಟ್ ಅಪ್ ಏರಿಯಾದಲ್ಲಿ ನಿರ್ಮಿಸಲಾಗಿದೆ. ಸನ್ನಿ ಲಿಯೋನ್ (Sunny Leone) ಅವರು ಈ ಜಾಗವನ್ನು ಆನಂದ್ ಕಮಲನಯನ್ ಪಂಡಿತ್ ಮತ್ತು ರೂಪಾ ಆನಂದ್ ಪಂಡಿತ್ ಅವರ ಒಡೆತನದ ಐಶ್ವರ್ಯ ಪ್ರಾಪರ್ಟಿ ಮತ್ತು ಎಸ್ಟೇಟ್ ಏಜೆನ್ಸಿಯಿಂದ ಖರೀದಿಸಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.