

ಹೈದರಾಬಾದ್: 2023ರಲ್ಲಿ ಬಿಡುಗಡೆಯಾಗಿ ಬಾಕ್ಸ್ಅಫೀಸ್ನಲ್ಲಿ ಧೂಳೆಬ್ಬಿಸುವ ಮೂಲಕ ಬಾಲಿವುಡ್ಗೆ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿದ್ದ ಗದರ್-2 ಚಿತ್ರದ ಬಳಿಕ ನಟ, ರಾಜಕಾರಣಿ ಸನ್ನಿ ಡಿಯೋಲ್ ಕಾಣೆಯಾಗಿದ್ದರು. ಗದರ್-2 ಬಳಿಕ ಇದೀಗ ತೆಲುಗು ನಿರ್ದೇಶಕನ ಜೊತೆ ಕೈ ಜೋಡಿಸಿರುವ ಸನ್ನಿ ಮತ್ತೊಮ್ಮೆ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿದ್ದಾರೆ.
ಬಾಲಿವುಡ್ನ ಆ್ಯಕ್ಷನ್ ಹೀರೋ ಎಂದೇ ಹೆಸರುವಾಸಿಯಾಗಿರುವ ಸನ್ನಿ ಡಿಯೋಲ್ಗೆ ಕ್ರ್ಯಾಕ್, ವೀರ ಸಿಂಹ ರೆಡ್ಡಿ, ಬಲುಪುನಂತಹ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನ್ನಿಸಿಕೊಂಡಿರುವ ಗೋಪಿಚಂದ್ ಮಲ್ಲಿನೇನಿ ಸನ್ನಿ ಡಿಯೋಲ್ ಅವರ ಮುಂದಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಚಿತ್ರದಲ್ಲೂ ಭರ್ಜರಿ ಸಾಹಸವನ್ನು ನಿರೀಕ್ಷಿಸಬಹುದಾಗಿದೆ.
ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದು, ಸನ್ನಿಗೆ ಜೊತೆಯಾಗಿ ರೆಜಿನಾ ಹಾಗೂ ಸೈಯಾಮಿ ಖೇರ್ ನಟಿಸುತ್ತಿದ್ದಾರೆ. ಚಿತ್ರಕ್ಕೆ SDGM ಎಂದು ಅಧಿಕೃತವಾಗಿ ಟೈಟಲ್ ಇಡಲಾಗಿದ್ದು, ಚಿತ್ರತಂಡ ಹಾಗೂ ತಾರಬಳಗದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್ ಸ್ಟಾರ್ಸ್ ಗೆಲುವಿಗಾಗಿ ಸೌತ್‌ನತ್ತ ಮುಖ ಮಾಡುತ್ತಿದ್ದಾರೆ. ಅದೇ ತಂತ್ರವನ್ನೇ ಸನ್ನಿ ಡಿಯೋಲ್ ಮಾಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಕುರಿತ ಸಿನಿಮಾ ಬರಲು ‘ಗದರ್ 2’ ನಟ ರೆಡಿಯಾಗಿದ್ದಾರೆ.