ನಾನು ಎಷ್ಟು ಅಂತ ಅದನ್ನೇ ಮಾಡಲಿ? ಇದೊಂದೇ ಕಾರಣಕ್ಕೆ ಅಂದು ನಟನೆ ತೊರೆದಿದ್ದೆ: ನಟಿ ಸುನೀತಾ ರಾಜ್ವರ್

Untitled design (50)
Published on

ಮುಂಬೈ: ಜನಪ್ರಿಯ 'ಗುಲ್ಲಕ್' ಟಿವಿ ಧಾರವಾಹಿಯಲ್ಲಿ 'ಬಿಟ್ಟು ಕೀ ಮಮ್ಮಿ' ಪಾತ್ರದಿಂದಲೇ ಎಲ್ಲರ ಮನಗೆದ್ದ ನಟಿ ಸುನಿತಾ ರಾಜ್ವರ್​, ಇತ್ತೀಚೆಗಷ್ಟೇ ತಮಗಾದ ನೋವಿನ ಬಗ್ಗೆ ಮುಕ್ತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಅಂದು ತಾನು ನಟನಾ ವೃತ್ತಿ ತ್ಯಜಿಸಿದ್ದೇಕೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ನಟಿ, "ನನಗೆ ಮೊದಲಿನಿಂದಲೂ ಮನೆ ಕೆಲಸದವಳ ಪಾತ್ರವನ್ನೇ ಕೊಡುತ್ತಿದ್ದರು. ಒಂದು ಬಾರಿ, ಎರಡು ಬಾರಿ ಆದರೆ ಓಕೆ. ಆದರೆ, ಪ್ರತಿಬಾರಿ ಇದೇ ರೋಲ್ ಕೊಟ್ಟರೆ ಹೇಗೆ? ಹಾಗಾಗಿ ಇನ್ಮುಂದೆ ಇಂತಹ ಪಾತ್ರವನ್ನು ನಾನು ನಿರ್ವಹಿಸುವುದಿಲ್ಲ, ನಿರ್ವಹಿಸಬಾರದು ಎಂದು ನನ್ನಲ್ಲೇ ಶಪಥ ಮಾಡಿಕೊಂಡು, ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದೆ" ಎಂದರು.

"ಒಬ್ಬ ಕಲಾವಿದೆಯಾಗಿ ನಾನು ಬಹಳಷ್ಟು ಅನುಭವಿಸಿದ್ದೇನೆ. ಪದೇ ಪದೇ ಇದೇ ರೀತಿಯ ಪಾತ್ರವನ್ನು ಮಾಡುವುದನ್ನು ನಾನು ಬಯಸುವುದಿಲ್ಲ. ಇದೇ ಕಾರಣಕ್ಕೆ ಕೆಲವು ಸಮಯದಿಂದ ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದು ಬೇಡ ಎಂದು ನಿರಾಕರಿಸುತ್ತಲೇ ಬಂದಿದ್ದೆ. ಆನಂತರ ದೃಢ ನಿರ್ಧಾರದಿಂದ ದೂರ ಸರಿದಿದ್ದೆ ಅಷ್ಟೇ" ಎಂದಿದ್ದಾರೆ. ಪ್ರಸ್ತುತ ನಟಿ 'ಪಂಜಾಯತ್​ 3' ವೆಬ್ ಸಿರೀಸ್​ನಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net