ಅಧ್ಯಕ್ಷರಾಗಿ ಸುಂದರೇಗೌಡ ಆಯ್ಕೆ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ವಾಸುದೇವ ಮೇಟಿ ಬಣ) ತಾಲೂಕು ಅಧ್ಯಕ್ಷರಾಗಿ ಸುಂದರೇಗೌಡ ಆಯ್ಕೆಯಾಗಿದ್ದಾರೆ.


ಪಿರಿಯಾಪಟ್ಟಣ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ನಿಮಿತ್ತ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘಟನೆಯ ವಿವಿಧ ವಿಭಾಗಗಳ ಪದಾಧಿಕಾರಿಗಳಾಗಿ ದಿನೇಶ್ ಗೌಡ, ಎ.ಕೆ.ಜಯಣ್ಣ, ಕುಬೇರ, ಗಣೇಶ್, ಪ್ರಸನ್ನ, ಆರ್.ಎಸ್.ರಾಜಶೇಖರ್, ರವಿ, ಮಹದೇವ್, ಕೆ.ದೊಡ್ಡಪ್ಪ, ಆನಂದ ಅವರನ್ನು ಆಯ್ಕೆ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಭಾರತದ ಅಂಗವಿಕಲರ ವಾಲಿಬಾಲ್ ತಂಡದ ಆಟಗಾರ ತಾಲೂಕಿನ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಲೋಕೇಶ್, ರಾಜ್ಯ ಕಾರ್ಯದರ್ಶಿ ಮೋಹನ್, ಮೈಸೂರು, ಕೊಡಗು ಸಂಚಾಲಕ ಡಾ.ಅರುಣ್ ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net