ಸಾಗರದ ಸೌತೆ ಕಾಯಿಗೆ ಭರ್ಜರಿ ಬೇಡಿಕೆ

sgr vegetables
ಸಾಗರದಲ್ಲಿ ಸೌತೆಕಾಯಿ ಮಾರಾಟ ಮಾಡುತ್ತಿರುವ ರೈತ ಮಹಿಳೆ.
Published on

ಸಾಗರ: ಬಿಸಿಲ ಧಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಕಲ್ಲಂಗಡಿ, ಎಳನೀರು ಮುಂತಾದ ತಂಪು ಪಾನೀಯಗಳ ಮೊರೆ ಹೋಗುವುದು ಸಹಜ. ಆದರೆ ತಾಲೂಕಿನಲ್ಲಿ ಜನರು ಬಾಯಾರಿಕೆ ನೀಗಿಸಿಕೊಳ್ಳಲು ಮುಳ್ಳು ಸೌತೆಕಾಯಿ ಮೊರೆ ಹೋಗಿದ್ದಾರೆ.
ತಾಲೂಕಿನ ಶಿರವಾಳ, ಕೆಳದಿ, ತೊರವಗೋಡು, ಸೂರನಗದ್ದೆ, ಬರದವಳ್ಳಿ, ಪಡವಗೋಡು ಭಾಗದಲ್ಲಿ ರೈತರು ಕೊಂಚ ನೀರಿನ ಆಶ್ರಯ ಹೊಂದಿದ್ದಾರೆ. ಮನೆಯ ಗೊಬ್ಬರವನ್ನೇ ಬಳಸಿ ಮುಳ್ಳು ಸೌತೆ ಅಥವಾ ಎಳೆ ಸೌತೆಕಾಯಿಯನ್ನು ಬೆಳೆಯುತ್ತಿದ್ದಾರೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಸೌತೆ ಕಾಯಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಈ ಸೌತೆ ಕಾಯಿ ತಿನ್ನಲು ಬಲುರುಚಿ, ಜತೆಗೆ ಒಳಗೆ ನೀರಿನ ಪಸೆ ಇರುತ್ತದೆ. ಒಂದು ಕೆ.ಜಿ.ಗೆ 40 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಚಾಮರಾಜಪೇಟೆಯ ರಸ್ತೆಗಳಲ್ಲಿ ರೈತರು ತಾವು ಬೆಳೆದ ತರಕಾರಿಗಳನ್ನು ದಿನನಿತ್ಯ ಸಾಗರಕ್ಕೆ ತಂದು ಮಾರಾಟ ಮಾಡುತ್ತಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದ ಎಳೆ ಸೌತೆಕಾಯಿಗೆ ಹೆಚ್ಚಿನ ಬೇಡಿಕೆ ಇದೆ. ಜನ ಮುಗಿಬಿದ್ದು ಖರೀದಿಸುತ್ತಿದ್ದು ಬೆಳೆಗಾರರಲ್ಲಿ ಸಂತಸ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net