ಚಿಂತಾಮಣಿ: ನಗರದ ಬೆಂಗಳೂರು ಜೋಡಿ ರಸ್ತೆಯ ರಾಜೀವ್ ನಗರ ಬಡಾವಣೆಯಲ್ಲಿ ಹಗಲೇ ಸಂಪ್ಗೆ ಅಳವಡಿಸಿದ್ದ ಮೋಟಾರ್ ಕಳ್ಳತನ ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ರಸ್ತೆ ಮೂಲಕ ಬಂದ ಕಳ್ಳ ಮಂಜುಳಾ ಎಂಬವವರ ಕಾಂಪೌಂಡ್ ಒಳಗೆ ತೆರಳಿ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ ಮೆಟ್ಟಿಲು ಕೆಳಗಡೆ ಅಳವಡಿಸಿದ್ದ ಸಂಪ್ ಮೋಟಾರ್ ಪೈಪ್ ಮತ್ತು ವಿದ್ಯುತ್ ಸಂಪರ್ಕ ಪೈಪ್ಗಳನ್ನು ಕಟ್ ಮಾಡಿ ತೆಗೆದುಕೊಂಡು ಹೋಗಿದ್ದಾನೆ. ನಗರದಲ್ಲಿ ಕಳ್ಳತನ ಜಾಸ್ತಿಯಾಗುತ್ತಿದ್ದು, ಕಳ್ಳತನ ಪ್ರಕರಣ ಪತ್ತೆ ಮಾಡುವಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.