

ಮುಂಬೈ: 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಡುವೆ ಪ್ರೀತಿ ಇತ್ತು ಎನ್ನಲಾಗಿತ್ತು. ಆದರೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹೋಳಿ ಸಂದರ್ಭದಲ್ಲಿ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್ ಫರ್ನಾಂಡಿಸ್ಗೆ ಲವ್ ಲೆಟರ್ ಬರೆದಿದ್ದಾನೆ ಎನ್ನಲಾಗಿದೆ.
ಪತ್ರದಲ್ಲಿ ಏನಿದೆ?: ಒಳ್ಳೆಯ ವ್ಯಕ್ತಿ, ನನ್ನ ಬ್ಯೂಟಿಫುಲ್ ಜಾಕ್ವೆಲಿನ್ಗೆ ಹೋಳಿ ಶುಭಾಶಯ. ಈ ದಿನ ಬಣ್ಣಗಳ ಹಬ್ಬ. ಮರೆಯಾದ ಬಣ್ಣಗಳು 100 ಪಟ್ಟು ಹೆಚ್ಚಾಗಿ ನಿಮ್ಮ ಬಳಿ ಬರುತ್ತವೆ. ಈ ವರ್ಷ ನಿಮ್ಮ ಬದುಕು ಪ್ರಕಾಶಮಾನವಾಗುತ್ತದೆ. ಆ ರೀತಿ ಆಗುವಂತೆ ಮಾಡೋದು ನನ್ನ ಜವಾಬ್ದಾರಿ. ‘ಐ ಲವ್ ಯೂ ಮೈ ಬೇಬಿ ಗರ್ಲ್ಯಾವಾಗಲೂ ನಗುತ್ತಾ ಇರು. ಲವ್ ಯು ಮೈ ಪ್ರಿನ್ಸೆಸ್. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಬೊಮ್ಮ ನೀನು, ನನ್ನ ಪ್ರೀತಿ’ ಎಂದು ಪತ್ರದಲ್ಲಿ ಸುಕೇಶ್ ಬರೆದುಕೊಂಡಿದ್ದಾನೆ. ಈ ಪತ್ರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವಿದ್ಯುತ್ ತಂತಿ ತಗುಲಿ ಪ್ರಾಣ ಬಿಟ್ಟ ಮೂರು ಆನೆಗಳು
ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಸುಕೇಶ್ನಿಂದ ಹಲವು ದುಬಾರಿ ಗಿಫ್ಟ್ ಪಡೆದಿರುವುದರಿಂದ ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದಿಂದ ಎದುರಾಗುತ್ತಿರುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ.