ಚಿಂತಾಮಣಿ: ನಗರದ ಹೊರವಲಯದ ಬಾಗೇಪಲ್ಲಿ ರಸ್ತೆಯ ರೈಲ್ವೆ ಅಂಡರ್ಪಾಸ್ ಸಮೀಪ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಅಂಜನಿ ಬಡಾವಣೆ ನಿವಾಸಿ ವಿಡಿಯೋ ಮತ್ತು ೋಟೋಗ್ರಾಫರ್ ಜಯಪ್ರಕಾಶ್ (50) ಮೃತ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಜಯಪ್ರಕಾಶ್ ಪತ್ನಿ ವಿಚ್ಛೇದನ ಪಡೆದು ಮಕ್ಕಳಿಂದ ದೂರವಾಗಿದ್ದರು. ಜತೆಗೆ ಜಯಪ್ರಕಾಶ್ ಹಣಕಾಸಿನ ವಿಚಾರದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಸ್ಥಳ ಪರಿಶೀಲಿಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀೆಗೆ ರವಾನಿಸಿದರು. ಮಂಗಳವಾರ ಮಧ್ಯಾಹ್ನ ನಗರದ ಹರಿಶ್ವಂದ್ರ ಘಾಟ್ನಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.