ರಾಜಕುಮಾರಿಯಾದ ಶಾರುಖ್​ ಪುತ್ರಿ! ಮಹತ್ವದ ವಿಷಯ ಬಹಿರಂಗಪಡಿಸಿದ ಸುಹಾನಾ ಖಾನ್​ Shah Rukh Khan

untitled-design-63-69074f9d5aef0 (1)
Published on

Shah Rukh Khan: ಶಾರುಖ್ ಖಾನ್ ಅವರ ಮುಂಬರುವ ಚಿತ್ರವಾದ ಕಿಂಗ್​ನ ಶೀರ್ಷಿಕೆಯನ್ನು ಪೋಸ್ಟರ್​ ಮೂಲಕ ಘೋಷಿಸಿದ್ದು, ಇದು 2026 ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಈ ಸಿನಿಮಾದಲ್ಲಿ ನಮಗೆಲ್ಲರಿಗೂ ತಿಳಿದಿರುವಂತೆ, ಶಾರುಖ್ ಅವರ ಮಗಳು ಸುಹಾನಾ ಖಾನ್ ಕೂಡ 'ಕಿಂಗ್' ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗೆ ನಟಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಶಾರುಖ್​ ಅವರ ಹುಟ್ಟುಹಬ್ಬದ ವಿಶೇಷ ಪೋಸ್ಟ್​ನಲ್ಲಿ ತಮ್ಮ ತಂದೆಯ ಸಿನಿಮಾದಲ್ಲಿ ತಾನು ನಟಿಸುತ್ತಿರುವುದಾಗಿ ಪೋಸ್ಟ್​ ಮೂಲಕ ತಿಳಿಸಿದ್ದಾರೆ.

ಕಿಂಗ್ ಚಿತ್ರದಲ್ಲಿ ಸುಹಾನಾ ಖಾನ್

ಕಿಂಗ್ ಚಿತ್ರದ ಸೆಟ್‌ಗಳಿಂದ ಕಾಫಿ ಕುಡಿಯುವ ಮಗ್​ಗಳ ಚಿತ್ರವನ್ನು ನಟಿ ಸುಹಾನಾ ಖಾನ್ ಹಂಚಿಕೊಂಡಿದ್ದಾರೆ. ಒಂದು ಕಪ್​ನಲ್ಲಿ ಕಿಂಗ್ ಎಂದು ಮತ್ತೊಂದು ಕಪ್​ನಲ್ಲಿ ರಾಜನ ರಾಜಕುಮಾರಿ ಎಂದು ಬರೆಯಲಾಗಿದ್ದು, ಸುಹಾನಾ ಪೋಸ್ಟ್​ಗೆ ಜನ್ಮದಿನದ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಪೋಸ್ಟ್​ ಕಿಂಗ್​ ಚಿತ್ರದಲ್ಲಿ ಸುಹಾನಾ ಖಾನ್, ಶಾರುಖ್​ ಖಾನ್​ ಅವರ ಮಗಳ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಫೋಟೋಗಳು ಸ್ಪಷ್ಟವಾಗಿ ಸೂಚಿಸುತ್ತವೆ. ದೊಡ್ಡ ಪರದೆಯ ಮೇಲೆ ಮೊದಲ ಬಾರಿಗೆ ತಂದೆ- ಮಗಳ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ.

ಸುಹಾನಾ ಖಾನ್ ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಸಾಕಷ್ಟು ಪ್ರೀತಿ ವ್ಯಕ್ತಪಡಿಸಿದ್ದಾರೆ. ಒಬ್ಬ ಇನ್​ಸ್ಟಾಗ್ರಾಮ್​ ಬಳಕೆದಾರ ಸುಹಾನಾ ರಾಜನ ಪಾತ್ರದಲ್ಲಿ ರಾಣಿಯಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಆಹಾ ನನ್ನ ಮಕ್ಕಳೇ, ಈ ಚಿತ್ರಕ್ಕೆ ನನಗೆ ಯಾವಾಗಲೂ ರಾಜ ಮತ್ತು ಅವನ ರಾಜಕುಮಾರಿ ಎಂದು ಹೆಸರಿಡಲಾಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮ್ಮ ಸ್ಥಳದಲ್ಲಿ ಯಾರು ಬೇಕಾದ್ರೂ ದೇಗುಲ ಕಟ್ಟಬಹುದಾ? ಕಾನೂನು ಹೇಳುವುದೇನು? ಇಲ್ಲಿದೆ ಉತ್ತರ | Kashibugga Stampede

ಸುಹಾನಾ ಖಾನ್ ಹಿನ್ನಲೆ

ನಟಿ ಜೋಯಾ ಅಖ್ತರ್ ಅವರ ನೆಟ್‌ಫ್ಲಿಕ್ಸ್ ಚಿತ್ರ 'ದಿ ಆರ್ಚೀಸ್' ಮೂಲಕ ಅಗಸ್ತ್ಯ ನಂದಾ, ಖುಷಿ ಕಪೂರ್ ಮತ್ತು ಇತರರೊಂದಿಗೆ ಸುಹಾನಾ ಖಾನ್ ನಟನೆಗೆ ಪಾದಾರ್ಪಣೆ ಮಾಡಿದರು. ಆ ಚಿತ್ರದ ಅಭಿನಯಕ್ಕಾಗಿ ಸುಹಾನಾ ಖಾನ್ ಅವರಿಗೆ ಸಾಕಷ್ಟು ಪ್ರೀತಿ ಸಿಗಲಿಲ್ಲ. ಆದರೆ ಈಗ, ನಟಿ ತನ್ನ ತಂದೆಯೊಂದಿಗೆ ಪರದೆ ಹಂಚಿಕೊಂಡಿದ್ದಾರೆ.

ಕಿಂಗ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿದ್ದು, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ಅರ್ಷದ್ ವಾರ್ಸಿ, ಜೈದೀಪ್ ಅಹ್ಲಾವತ್, ಅಭಯ್ ವರ್ಮಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net