ಕಬ್ಬು ಅರೆಯುವ ಯಂತ್ರ ಕಾರ್ಮಿಕನನ್ನೇ ರುಬ್ಬಿತು.. ಇಡೀ ದೇಹ ನಜ್ಜುಗುಜ್ಜಾಯ್ತು!

sugarcane
Published on

ಮೈಸೂರು: ಕಬ್ಬು ಅರೆಯುವ ಯಂತ್ರಕ್ಕೆ ಸಿಲುಕಿದ ಕಾರ್ಮಿಕನ ಇಡೀ ದೇಹ ನಜ್ಜುಗುಜ್ಜಾದ ದುರ್ಘಟನೆ ನಂಜನಗೂಡು ತಾಲೂಕಿನ ಮಲ್ಲೂಪುರ ಗ್ರಾಮದಲ್ಲಿ ಸಂಭವಿಸಿದೆ.

ಮಲ್ಲೂಪುರ ಗ್ರಾಮದ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಯಂತ್ರವನ್ನು ವೆಲ್ಡಿಂಗ್ ಮಾಡುವ ಸಂದರ್ಭದಲ್ಲಿ ಅಚಾತುರ್ಯ ಸಂಭವಿಸಿ ಕಾರ್ಮಿಕ ಅಮೃತ್ ಕುಮಾರ್ ಕಾಲುಜಾರಿ ಯಂತ್ರಕ್ಕೆ ಸಿಲುಕಿದ್ದರು. ಕಬ್ಬಿನಂತೆ ಈತನನ್ನೂ ರುಬ್ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮೂಲದ ಗುತ್ತಿಗೆ ಅಮೃತ್ ಕುಮಾರ್(30) ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿದ್ದ. ಘಟನಾ ಸ್ಥಳಕ್ಕೆ ನಂಜನಗೂಡಿನ ಡಿವೈಎಸ್ಪಿ ಪ್ರಭಾಕರ್ ರಾವ್ ಸಿಂಧೆ, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ್, ಬಿಳಿಗೆರೆ ಪಿಎಸ್ಐ ಭೇಟಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net