More

    ಭೀಕರ ಅಪಘಾತದಲ್ಲಿ ಬದುಕಿದರೂ ಮನೆಗೆ ಬಂದವ ನೇಣಿಗೆ ಕೊರಳೊಡ್ಡಿದ.. ಏನಾಯ್ತು ಎಲ್​ಎಲ್​ಬಿ ವಿದ್ಯಾರ್ಥಿಗೆ?

    ನೇಕಲ್: ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಕಾರಿನಲ್ಲಿ ಬರುವಾಗ ಅಪಘಾತಕ್ಕೀಡಾದರೂ ಪವಾಡ ಸದೃಶ ಪಾರದ ಕಾನೂನು ವಿದ್ಯಾರ್ಥಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಸಂಭವಿಸಿದೆ.

    ಅಲೈನ್ಸ್ ಕಾಲೇಜಿನ ವಿದ್ಯಾರ್ಥಿ ಕೌಶಿಕ್(20) ಮೃತ. ಕಾಲೇಜು ರಜಾ ಇರುವುದರಿಂದ ಸಮೀಪದ ಈಡನ್ ಗಾರ್ಡನ್​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕಳೆದ ರಾತ್ರಿ ಸ್ನೇಹಿತನ ಜೊತೆ ಹೋಗಿ ‘ಎಣ್ಣೆ’ ಪಾರ್ಟಿ ಮಾಡಿದ್ದ. ಬಳಿಕ ಹೊಸೂರಿನಿಂದ ವಾಪಸ್​ ಮನೆಗೆ ಬರುವ ಮಾರ್ಗಮಧ್ಯೆ ಹೊಸೂರು ರಸ್ತೆಯ ಗುಡ್ಡನಹಳ್ಳಿಯಲ್ಲಿ ಕಾರು ಸ್ಕಿಡ್ ಆಗಿ ಪಲ್ಟಿ ಹೊಡೆದಿತ್ತು. ಪ್ರಾಣಾಪಾಯದಿಂದ ಕೌಶಿಕ್​ ಪಾರಾದರೂ ಗಾಯಗೊಂಡಿದ್ದ. ಸ್ಥಳೀಯರು ಕೌಶಿಕ್​ನನ್ನು ಆಸ್ಪತ್ರೆಗೆ ಆಟೋದಲ್ಲಿ ಕಳುಹಿಸಿದ್ದರು. ಆದರೆ ಆತ ಆಸ್ಪತ್ರೆಗೆ ಹೋಗದೆ ಮನೆಗೆ ಹೋಗಿದ್ದ.

    ಇದನ್ನೂ ಓದಿರಿ ‘ಜಮೀರ್​ ಅಹ್ಮದ್​ ಬೆಂಗಳೂರು ಗಲಭೆಯ ಡೈರೆಕ್ಟರ್​, ಪ್ರೊಡ್ಯೂಸರ್​…’

    ಆಸ್ಪತ್ರೆಗೆ ಹೋಗದೆ ಮನೆ ಹೋದ ಕೌಶಿಕ್​ ಮತ್ತು ಆತನ ಸ್ನೇಹಿತ ಮನೆಯ ಮೊದಲ ಮಹಡಿಯಲ್ಲಿ ಬೀಗ ಒಡೆದು ಒಳಗೆ ಹೋಗಿದ್ದರು. ಮನೆ ಒಳಗೆ ಹೋದನಂತರ ಸ್ನೇಹಿತನನ್ನು ರೂಮಿನಲ್ಲಿ ಕೂಡಿ ಹಾಕಿದ ಕೌಶಿಕ್​, ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ. ರೂಮಿನಲ್ಲಿದ್ದ ಸ್ನೇಹಿತನ ಕೂಗಾಟ ಕೇಳಿದ ಸ್ಥಳೀಯರು ಬಂದು ನೋಡಿದ್ದಾರೆ. ಅಷ್ಟರಲ್ಲಿ ಕೌಶಿಕ್ ಮೃತಪಟ್ಟಿದ್ದ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ.

    ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts