'ಮ್ಯಾಕ್ಸ್​' ರಿಲೀಸ್​ಗೆ ಕ್ಷಣಗಣನೆ: ಅಮ್ಮನ ನೆನೆದು ಕಿಚ್ಚ ಸುದೀಪ್​ ಭಾವುಕ ಪೋಸ್ಟ್​ | Max Release

ವಿಜಯವಾಣಿ - 2024-12-24T223610.603
Published on

Max Release: ಕನ್ನಡ ಚಿತ್ರರಂಗದ ಬಾದ್​ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ‘ಮ್ಯಾಕ್ಸ್’​ ಸಿನಿಮಾ ರಿಲೀಸ್​ಗೆ ಇದೀಗ ಕ್ಷಣಗಣನೆ ಆರಂಭಗೊಂಡಿದೆ. ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಎರಡೂವರೆ ವರ್ಷಗಳ ಬಳಿಕ ಸುದೀಪ್ ನಾಯಕರಾಗಿ ಕಾಣಿಸಿಕೊಂಡಿರುವ ‘ಮ್ಯಾಕ್ಸ್’ ಬಿಡುಗಡೆಗೆ ಸದ್ಯ ಕಾತರ ದುಪ್ಪಟ್ಟಾಗಿದೆ. ಸಿನಿಮಾದ ರಿಲೀಸ್​ಗೆ ಕ್ಷಣಗಣನೆಯ ಬೆನ್ನಲ್ಲೇ ಚಿತ್ರಮಂದಿರದ ಮುಂದೆ ಕಿಚ್ಚನ 6 ಅಡಿಯ ಕಟ್​ಔಟ್​ಗಳು ತಲೆಎತ್ತಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಆದರೆ, ಕಿಚ್ಚನಲ್ಲಿ ಅಮ್ಮನ ನೆನಪು ಕಾಡಿದೆ.

"ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಥಿಯೇಟರ್‌ಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿರುವುದು ಒಂದೆಡೆ ಖುಷಿ ತಂದರೆ, ಇದು ಸಂತೋಷದ ಕ್ಷಣ ಮತ್ತು ಆಚರಿಸಲು ಸಮಯವಾಗಿದ್ದರೂ, ನಾನು ನೋವು ಮತ್ತು ಅಗಲಿಕೆಯನ್ನು ಅನುಭವಿಸುತ್ತಿದ್ದೇನೆ. ನನ್ನ ಪ್ರೀತಿಯ ಅಮ್ಮ ನೀವು ನನ್ನ ಒಂದೇ ಒಂದು ಸಿನಿಮಾವನ್ನು ಇಲ್ಲಿಯವರೆಗೆ ತಪ್ಪಿಸಿರಲಿಲ್ಲ. ಆದರೆ, ಈ ಹೊಸ ಆರಂಭದ ಮೊದಲನೆಯದು ಮಿಸ್​ ಆಗಲಿದೆ. ಇದು ಅತೀವ ದುಃಖ ಉಂಟು ಮಾಡುತ್ತದೆ. ಬಹಳ ನೋವು ಕಾಡುತ್ತಿದೆ" ಎಂದಿದ್ದಾರೆ.

"ಈ ಸಿನಿಮಾದ ಆರಂಭದಲ್ಲಿ ಅಮ್ಮನ ಸ್ಮರಣೆಯ ಕಾರ್ಡ್‌ ಪರದೆಯ ಮೇಲೆ ಮೂಡಲಿರುವುದನ್ನು ಊಹಿಸಿಕೊಳ್ಳುವುದು ಕಷ್ಟ. ಆಕೆಯ ಫೋಟೋ ಈ ರೀತಿ ತೆರೆಮೇಲೆ ಬರುವುದನ್ನು ನೋಡುವ ಶಕ್ತಿ ನನ್ನಲ್ಲಿದೆಯೋ ನನಗೆ ಗೊತ್ತಿಲ್ಲ. ಇನ್ನು ಅಪ್ಪ ಕೂಡ ಇದನ್ನು ನೋಡುವುದರಿಂದ ಅವರ ಮೇಲಿನ ಕಾಳಜಿ ಹೆಚ್ಚಿದೆ. ಮಿಸ್ ಯು ಅಮ್ಮಾ. ನಿಮ್ಮ ಮಗನ ಕೆಲಸವನ್ನು ನೋಡಿದಾಗಲೆಲ್ಲಾ ನಿಮ್ಮ ಮುಖದ ಮೇಲೆ ಇರುತ್ತಿದ್ದ ಸಂತಸ ಹಾಗೂ ಮುಗುಳುನಗೆಯನ್ನು ಖಂಡಿತ ಮಿಸ್​ ಮಾಡಿಕೊಳ್ಳುತ್ತೀನಿ. ಸುಖಕರ ಸ್ಥಳವನ್ನೇ ತಲುಪಿರುವೆ, ಅಲ್ಲಿಯೇ ನೆಲೆಸಿರುವೆ ಎಂದು ಪ್ರಾರ್ಥಿಸುವೆ ಅಮ್ಮಾ" ಎಂದು ಬರೆದು, ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net