ಮರಳಿನಲ್ಲಿ ಅರಳಿತು ಸೋನು ಸೂದ್​ ಕಲಾಕೃತಿ; ಸುದರ್ಶನ್​ ಪಟ್ನಾಯಕ್ ಕಲಾನಮನ

Sood JPG
Published on

ನವದೆಹಲಿ: ಲಾಕ್​ಡೌನ್​​ನಿಂದಾಗಿ ಅಲ್ಲಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ಊರು ಸೇರಲು ಸಾರಿಗೆ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್ ಅವರ ಕಾರ್ಯ ಶ್ಲಾಘಿಸಿ ಕಲಾವಿದ ಸುದರ್ಶನ್ ಪಟ್ನಾಯಕ್ ಕಲಾನಮನ ಸಲ್ಲಿಸಿದ್ದಾರೆ.

ಒಡಿಶಾದ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ಪಟ್ನಾಯಕ್, ಸೋನು ಸೂದ್ ಅವರ ಕಲಾಕೃತಿ ಮೂಡಿಸುವ ಮೂಲಕ ಅವರಿಗೆ ಕೃತಜ್ಱತೆ ಸಲ್ಲಿಸಿದ್ದಾರೆ.

ಕಲಾಕೃತಿಯಲ್ಲಿ ಸೋನು ಸೂದ್ ಅವರ ಚಿತ್ರ ರಚಿಸಿ ಅದರ ಮುಂದೆ 'ನೀವೇ ನಿಜವಾದ ನಾಯಕ ಸೋನು ಸೂದ್' ಎಂದು ಬರೆದು ಟ್ವೀಟರ್​​ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಟ್ವಿಟರ್​​ನಲ್ಲಿ ಹಂಚಿಕೊಂಡ ಚಿತ್ರ ಜತೆಗೆ "ನಿಮ್ಮ ಉದಾತ್ತ ಕಾರ್ಯಗಳಿಗೆ ನಮ್ಮ ನಮನ ಸೋನು ಸೂದ್ ಜಿ. ಈ ಕರೊನಾದ ಈ ಸಂದಿಗ್ಧ ಸಮಯದಲ್ಲಿ ಅಸಹಾಯಕರಿಗೆ ನೀವು ಮಾಡಿದ ಸಹಾಯ ವಿವರಿಸಲು ಪದಗಳು ಸಹ ಸಾಕಾಗುವುದಿಲ್ಲ. ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಕಲಾಕೃತಿ ರಚಿಸುವ ಮೂಲಕ ಗೌರವ ಮತ್ತು ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಕ್ಯಾಪ್ಷನ್ ಬರೆದಿದ್ದಾರೆ.ಪಟ್ನಾಯಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ ನಂತರ, ಸೂದ್ ಅದಕ್ಕೆ ರಿಟ್ವೀಟ್ ಮಾಡಿ ಈ ಅನನ್ಯ ಕಲಾಕೃತಿ ರಚಿಸಿದ ಕಲಾವಿದನಿಗೆ ಧನ್ಯವಾದ ಅರ್ಪಿಸಿದ್ದಾರೆ. "ತುಂಬಾ ಧನ್ಯವಾದಗಳು ಸಹೋದರ. ಇದರೊಂದಿಗೆ ನನ್ನ ದಿನವನ್ನು ಪ್ರಾರಂಭಿಸುವುದರಿಂದ ಕಷ್ಟಪಟ್ಟು ಕೆಲಸ ಮಾಡಲು ನನ್ನನ್ನು ಪ್ರೋತ್ಸಾಹಿಸುತ್ತದೆ'' ಎಂದಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸೋನು ಸೂದ್ ನಿರಂತರ ಸಹಾಯ ಮಾಡುತ್ತಿದ್ದಾರೆ. ಜನರು ಸಹಾಯಕ್ಕಾಗಿ ತಮ್ಮನ್ನು ಸಂಪರ್ಕಿಸಲು ಅವರು ಇತ್ತೀಚೆಗೆ ಟೋಲ್-ಫ್ರೀ ಸಂಖ್ಯೆಯನ್ನು ಪ್ರಾರಂಭಿಸಿದ್ದಾರೆ.

ಕೇರಳದಲ್ಲಿ ಸಿಲುಕಿಕೊಂಡಿದ್ದ 177 ಬಾಲಕಿಯರು ಒಡಿಶಾದ ತಮ್ಮ ಮನೆ ತಲುಪಲು ಸೂದ್ ವಿಮಾನ ವ್ಯವಸ್ಥೆ ಕಲ್ಪಿಸಿದ್ದರು. ಒಡಿಶಾ ಸಿಎಂ ನವೀನ್ ಪಟ್ನಾಯಕ್ ಕೂಡ ಟ್ವಿಟರ್​​ನಲ್ಲಿ ಸೂದ್​​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಕೇರಳದಲ್ಲಿ ಸಿಲುಕಿರುವ ಒಡಿಶಾ ಬಾಲಕಿಯರು ಮನೆಗೆ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಲು ಮುಂದೆ ಬಂದಿದ್ದಕ್ಕಾಗಿ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಧನ್ಯವಾದಗಳು. ಅವರ ಮಾನವೀಯತೆ ನಿಜಕ್ಕೂ ಶ್ಲಾಘನೀಯ ಎಂದು ಒಡಿಶಾ ಸಿ.ಎಂ. ಪತ್ರ ಟ್ವೀಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net