ಬೆಂಗಳೂರು: ಶಿಕ್ಷಕಿಯಾಗಿದ್ದುಕೊಂಡೇ ಸ್ವಅಧ್ಯಯನದಿಂದ 2017ರಲ್ಲಿ (14ನೇ ಬ್ಯಾಚ್) ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 24ನೇ ರಾಂಕ್ ಪಡೆದಿರುವ ಜಯಲಕ್ಷ್ಮಿ ರಾಯಕೋಡ, ಪ್ರಸ್ತುತ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1995ರಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಇವರು, ಎಂಎ, ಬಿ.ಇಡಿ, ಎಂ.ಇಡಿ ಹಾಗೂ ಎಂ.ಫಿಲ್ ಪೂರ್ಣಗೊಳಿಸಿದ್ದು, ಎಸ್‌ಇಟಿ ಮತ್ತು ಎನ್‌ಇಟಿಯಲ್ಲಿ ತೇರ್ಗಡೆಯಾಗಿದ್ದಾರೆ. 2007-08ರಲ್ಲಿ ಕರ್ನಾಟಕ ಶಿಕ್ಷಣ ಸೇವೆ (ಕೆಇಎಸ್) ಪರೀಕ್ಷೆಯಲ್ಲೂ 68ನೇ ರಾಂಕ್ ತಮ್ಮದಾಗಿಸಿಕೊಂಡಿದ್ದಾರೆ.