More

    ಕೇವಲ 12ನೇ ವಯಸ್ಸಿಗೆ ಮದುವೆಯಾಗಿ 2 ರೂ.ಸಂಪಾದಿಸುತ್ತಿದ್ದ ಕಲ್ಪನಾ ಸರೋಜ್ ಇಂದು 900 ಕೋಟಿ ಆಸ್ತಿ ಒಡತಿ

    ಕಲ್ಪನಾ ಸರೋಜ್ ಅವರು ಇಂದು ದೇಶದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಅವರ ಕಂಪನಿ ‘ಕಮಣಿ ಟ್ಯೂಬ್ಸ್’ ವಾರ್ಷಿಕ ಕೋಟಿಗಟ್ಟಲೇ ವಹಿವಾಟು ನಡೆಸುತ್ತಿದೆ. ಆದರೆ ಕಲ್ಪನಾ ಅವರು ಈ ಸ್ಥಾನಕ್ಕೇರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

    ಮುಂಬೈ: ಸರ್ವೇಸಾಮಾನ್ಯವಾಗಿ ಕನಸು ನನಸಾಗಲು ನಾವೆಲ್ಲಾ ಹಗಲು ರಾತ್ರಿ ಕಷ್ಟಪಡುತ್ತೇವೆ. ಅಂತೆಯೇ ಕಲ್ಪನಾ ಸರೋಜ್ ಎಂಬ ಮಹಿಳೆ ಉನ್ನತ ಸ್ಥಾನಕ್ಕೇರಲು ಪಟ್ಟ ಕಷ್ಟ ಒಂದೆರಡಲ್ಲ. ಗುಡಿಸಲಿನಿಂದ ಅರಮನೆಯ ತನಕ ಅವರ ಪಯಣ ಸುಲಭವಾಗಿರಲಿಲ್ಲ. ಓದಲು ಪ್ರಾರಂಭಿಸುವ ವಯಸ್ಸಿನಲ್ಲಿಯೇ ಮದುವೆಯಾದರು. ಇವರ ಭೂತಕಾಲ ಇಂದಿನ ವರ್ತಮಾನದಂತೆ ಇರಲಿಲ್ಲ. ಬಾಲ್ಯದಿಂದಲೂ ಕಿರುಕುಳ ಮತ್ತು ಮಾನಸಿಕ ಹಿಂಸೆ ಅನುಭವಿಸಬೇಕಾಯಿತು.

    ಕಲ್ಪನಾ ಸರೋಜ್ ಕೇವಲ 12 ನೇ ವಯಸ್ಸಿನಲ್ಲಿ ವಿವಾಹವಾದರು. ಶಿಕ್ಷಣದಿಂದ ವಂಚಿತರಾದ ಆಕೆ ಮಹಾರಾಷ್ಟ್ರದಲ್ಲಿ ನಿಯೋಜಿತರಾದ ಕಾನ್‌ಸ್ಟೆಬಲ್‌ನ ಮಗಳು. ಕಲ್ಪನಾ ತನ್ನ ಗಂಡನ ಕುಟುಂಬದೊಂದಿಗೆ ಮುಂಬೈನ ಕೊಳೆಗೇರಿಯಲ್ಲಿ ವಾಸಿಸಬೇಕಾಯಿತು. ಅತ್ತೆ ತೀವ್ರವಾಗಿ ಥಳಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಹೇಗೋ ತಂದೆಗೆ ವಿಷಯ ತಿಳಿದು ಅವರ ಹಿಡಿತದಿಂದ ರಕ್ಷಿಸಿ ಹೊರಗೆ ತಂದರು.

    ಈ ನಿರ್ಧಾರದಿಂದಾಗಿ ಗ್ರಾಮಸ್ಥರು ಕಲ್ಪನಾ ಕುಟುಂಬವನ್ನು ಬೆಂಬಲಿಸಲಿಲ್ಲ. ಅವರನ್ನು ಬಹಿಷ್ಕರಿಸಿದರು. ಇಂಥ ಸಮಯದಲ್ಲಿ ಕಲ್ಪನಾ ಆತ್ಮಹತ್ಯೆಗೂ ಯತ್ನಿಸಿದ್ದುಂಟು. ಈ ಅವಘಡದ ಪರಿಣಾಮ ಅವರ ಮನಸಿನಲ್ಲಿ ಬಹುಕಾಲ ಉಳಿಯಿತು. ಆದರೆ 16 ವರ್ಷವಾದಾಗ, ಅವಳು ಕುಟುಂಬವನ್ನು ಬೆಂಬಲಿಸಲು ಕೆಲಸ ಮಾಡಲು ಪ್ರಾರಂಭಿಸಿದಳು.

    2 ರೂ.ನಿಂದ ವೃತ್ತಿ ಆರಂಭ
    ಕಲ್ಪನಾ ಮುಂಬೈಗೆ ಬಂದು ಸರ್ಕಾರಿ ಜವಳಿ ಗಿರಣಿಯಲ್ಲಿ 2 ರೂಪಾಯಿಗೆ ಕೆಲಸ ಗಿಟ್ಟಿಸಿಕೊಂಡರು. ನಂತರ ಟೈಲರಿಂಗ್ ಆರಂಭಿಸಿದ ಅವರಿಗೆ ತಿಂಗಳಿಗೆ 50 ರೂ. ಆದಾಯವಿತ್ತು.

    90 ರ ದಶಕದಲ್ಲಿ ಬದಲಾದ ಜೀವನ 
    ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ನಂತರ, 1990 ರ ದಶಕದಲ್ಲಿ ಅವರು ಸ್ವಂತ ವ್ಯವಹಾರವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದರು. ಕಲ್ಪನಾ ಸರೋಜ್ ಅವರು ಕೆಎಸ್ ಫಿಲ್ಮ್ ಪ್ರೊಡಕ್ಷನ್ ಎಂಬ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು, ಇದು ತೆಲುಗು, ಇಂಗ್ಲಿಷ್ ಮತ್ತು ಹಿಂದಿ ಚಲನಚಿತ್ರಗಳನ್ನು ಬಿಡುಗಡೆ ಮಾಡಿತು.

    ರಿಯಲ್ ಎಸ್ಟೇಟ್ ನಿಂದ ಹಿಡಿದು ಫರ್ನಿಚರ್ ವರೆಗೆ 
    ಕಲ್ಪನಾ ಸರೋಜ್ ತನ್ನದೇ ಆದ ರಿಯಲ್ ಎಸ್ಟೇಟ್ ಉದ್ಯಮ ಸ್ಥಾಪಿಸಲು ಹಗಲಿರುಳು ಶ್ರಮಿಸಿದರು. ಅವರು ಥಾಣೆಯ ಉಲ್ಲಾಸನಗರದಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಿದರು. ಅವರು ಪೀಠೋಪಕರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ಅದರ ಬೆಲೆ 50,000 ರೂ.ಗಿಂತ ಕಡಿಮೆ. ಇವುಗಳನ್ನು ಜನರು ಹೆಚ್ಚು ಖರೀದಿಸಲು ಪ್ರಾರಂಭಿಸಿದರು.

    ಆರಂಭಿಕ ದಿನಗಳಲ್ಲಿ ಸ್ಪ್ರಿಂಗ್ ಟ್ಯೂಬ್‌ಗಳ ವ್ಯಾಪಾರವು ಅಷ್ಟೇನೂ ಚೆನ್ನಾಗಿ ನಡೆಯಲಿಲ್ಲ. ಅಂತೂ ತನ್ನ ಕಾರ್ಯತಂತ್ರದಿಂದ ಕಂಪನಿಗೆ ಹೊಸ ಆಯಾಮ ನೀಡಿದರು. ವ್ಯಾಪಾರವು ಸ್ವಲ್ಪ ಸಮಯದಲ್ಲೇ ಬೆಳೆಯಲು ಪ್ರಾರಂಭಿಸಿತು. ಪ್ರಸ್ತುತ ಕಲ್ಪನಾ ಸರೋಜ್ ಅವರ ಕಂಪನಿ 100 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಕಲ್ಪನಾ ಅವರ ವೈಯಕ್ತಿಕ ಸಂಪತ್ತು 112 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಅವರ ಒಟ್ಟು ಸಂಪತ್ತು 917 ಕೋಟಿ ರೂ.

    ಈ ಫೋಟೋದಲ್ಲಿರುವ ಬಾಲಕಿ ಈಗ ಜನಪ್ರಿಯ ನಟಿ, ಬಿಗ್ ಬಾಸ್‌ನಲ್ಲಿಯೂ ಸದ್ದು ಮಾಡಿದವರು…ಯಾರು ಹೇಳಿ ನೋಡೋಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts