ಖೋ-ಖೋ ಸಬ್ ಜೂನಿಯರ್; ಪ್ರೀಕ್ವಾರ್ಟರ್‌ಗೆ ಆತಿಥೇಯರ ಲಗ್ಗೆ

Nationals_KhoKho
Published on

ತುಮಕೂರು: ಆತಿಥೇಯ ಕರ್ನಾಟಕ ಬಾಲಕ, ಬಾಲಕಿಯರು ತಿಪಟೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ಜೂನಿಯರ್ ಹೊನಲುಬೆಳಕಿನ ಖೋ-ಖೋ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಆರಂಭವಾಗಿರುವ ಸಬ್‌ಜೂನಿಯರ್ ಖೋ-ಖೋ ಚಾಂಪಿಯನ್‌ಷಿಪ್‌ನ ಮೊದಲದಿನವಾದ ಬುಧವಾರ ‘ಬಿ’ ಗ್ರೂಪ್‌ನ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಬಾಲಕರ ತಂಡ ತಮಿಳುನಾಡು ವಿರುದ್ಧ ಹಾಗೂ ಬಾಲಕಿಯರ ತಂಡ ಉತ್ತರಖಾಂಡ್ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿದ್ದವು.

ಗುರುವಾರ ಗೆಲುವಿನ ಓಟ ಮುಂದುವರೆಸಿದ ಆತಿಥೇಯ ಬಾಲಕಿಯರ ತಂಡ 28-22 ಅಂಕಗಳ ಅಂತರದಿಂದ ಪಂಜಾಬ್ ವಿರುದ್ಧ ಜಯಗಳಿಸಿ ಪ್ರೀ-ಕ್ವಾರ್ಟರ್ ದಾರಿಯನ್ನು ಭದ್ರಪಡಿಸಿಕೊಂಡಿದೆ. ಕರ್ನಾಟಕ ಬಾಲಕರ ತಂಡವು ಏಕಪಕ್ಷೀಯವಾಗಿ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಜಯಗಳಿಸಿದ್ದು ಪ್ರೀಕ್ರಾರ್ಟರ್‌ನತ್ತ ದಾಪುಗಾಲಿಟ್ಟಿದೆ.

ಗುರುವಾರದ ಪಂದ್ಯಗಳು:

ಬಾಲಕರ ವಿಭಾಗ

1. ಒಡಿಸ್ಸಾ ತಂಡವು 16-14 ಅಂಕಗಳಿಂದ ಪಾಂಡಿಚೇರಿ ತಂಡವನ್ನು ಮಣಿಸಿತು.

2. ಕೇರಳ ತಂಡ 18-16 ಅಂಕಗಳಿಂದ ಗುಜರಾತ್ ತಂಡದ ವಿರುದ್ಧ ಗೆಲುವು

3.ತಮಿಳುನಾಡು 36-22 ಅಂಕಗಳಿಂದ ಜಾರ್ಖಂಡ ವಿರುದ್ಧ ಜಯ

4. ಚತ್ತೀಸಗಢ 34-10 ಅಂಕಗಳಿಂದ ಹಿಮಾಚಲಪ್ರದೇಶದ ವಿರುದ್ಧ ಗೆಲುವು

ಬಾಲಕಿಯರ ವಿಭಾಗ

1. ಒಡಿಸ್ಸಾ ತಂಡವು 32-12 ಅಂಕಗಳಿಂದ ಮಣಿಪುರ ವಿರುದ್ಧ ಜಯ

2. ಹರ್ಯಾಣ 42-10 ಅಂಕಗಳಿಂದ ಗೋವಾ ವಿರುದ್ಧ ಗೆಲುವು

3. ಜಾರ್ಖಂಡ 24 -20 ಅಂಕಗಳಿಂದ ಉತ್ತರಪ್ರದೇಶದ ವಿರುದ್ಧ ಜಯ

4. ಆಂಧ್ರಪ್ರದೇಶ 40-06 ಅಂಕಗಳಿಂದ ಜಮ್ಮ ಮತ್ತು ಕಾಶ್ಮೀರ ವಿರುದ್ಧ ಗೆಲುವು

5. ಒಡಿಸ್ಸಾ ತಂಡವು 22-08 ಅಂಕಗಳಿಂದ ಉತ್ತರಖಾಂಡ್ ವಿರುದ್ಧ ಜಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net