

ನವದೆಹಲಿ: ದಿನಕ್ಕೊಂದು ಹೊಸ ಲಕ್ಷಣದ ಮೂಲಕ ಜಗತ್ತನ್ನೇ ತಲ್ಲಣಗೊಳಿಸಿದ್ದು ಕೋವಿಡ್ 19ನಿಂದ ಕಿವಿಗೂ ಸೋಂಕು ತಗುಲಬಹುದಂತೆ! - ಸೈಂಟಿಫಿಕ್ ಜರ್ನಲ್ ಜೆಎಎಂಎ ಪ್ರಕಟಿಸಿರುವ ಅಧ್ಯಯನ ವರದಿಯಲ್ಲಿ ಕೋವಿಡ್ 19 ಕಿವಿ ಸೋಂಕಿನ ಉಲ್ಲೇಖ ಇರುವುದಾಗಿ ವರದಿಯಾಗಿದೆ.
ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟ ಮೂವರ ಶವಪರೀಕ್ಷೆಯ ವರದಿ ಆಧರಿಸಿದ ಅಧ್ಯಯನ ವರದಿ ಇದಾಗಿದ್ದು, ವೈರಸ್ ಕಿವಿಯೊಳಗೆ ಮಧ್ಯಭಾಗದಲ್ಲಿ ಇರುವುದು ಪತ್ತೆಯಾಗಿತ್ತು. ಅಲ್ಲದೆ, ಕಿವಿಯ ಹಿಂಭಾಗದ ತಲೆಯ ಭಾಗದಲ್ಲೂ ವೈರಸ್ ಇರುವಿಕೆ ಪತ್ತೆಯಾಗಿದೆ.
ಇದಕ್ಕೆ ಸಂಬಂಧಿಸಿ ಸಂಶೋಧನೆ ನಡೆಸುವ ಸಲುವಾಗಿ ಮೃತ ವ್ಯಕ್ತಿಯ ಕಿವಿಯ ಹಿಂಭಾಗದ ತಲೆಯ ಭಾಗವನ್ನು ಪ್ರತ್ಯೇಕಿಸಿ ಪರಿಶೀಲಿಸಿದಾಗ ಕಿವಿಯ ಮಧ್ಯಭಾಗದಲ್ಲಿರುವುದೂ ಪತ್ತೆಯಾಗಿತ್ತು. ಈ ವೈರಸ್ಗಳು SARS-CoV-2 ಆಗಿದ್ದವು. ಹೀಗಾಗಿ ಮಾಸ್ಕ್ ಧರಿಸಿಕೊಂಡು ಓಡಾಡುವುದು ಅವಶ್ಯ ಎಂಬುದನ್ನು ಮತ್ತೆ ಅಧ್ಯಯನ ದೃಢೀಕರಿಸಿದೆ. (ಏಜೆನ್ಸೀಸ್)