

ಹೊಸದಿಲ್ಲಿ: ಕ್ಯಾಂಪಸ್ ಪ್ರತಿಭಟನೆಗಳು ಹಾಗೂ ವಿವಾದಗಳ ನಡುವೆ ಹೋರಾಟ ಮಾಡಲು ಮುಂದಾಗುವ ವಿದ್ಯಾರ್ಥಿಗಳು ರಾಜಕೀಯ ವಿಚಾರಕ್ಕೆ ತುತ್ತಾಗುವ ಬದಲು ತಮ್ಮ ಅಧ್ಯಯನದತ್ತ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಉಪಕುಲಪತಿಗಳಾದ ಶಾಂತಿಶ್ರೀ ಡಿ.ಪಂಡಿತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಪ್ರತಿಭಟನೆಗಳಿಗೆ ಅವಕಾಶವಿದ್ದರೂ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದ್ಧತೆಗಳಿಗೆ ಧಕ್ಕೆ ತರಬಾರದು ಎಂದು ಒತ್ತಿ ಹೇಳಿದ ಪಂಡಿತ್, ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ವಿಸ್ತರಣೆಗಳನ್ನು ಪಡೆಯಲು ಕಾರಣವಾಗಬಹುದು, ಇದು ಮುಂದಿನ ದಿನಗಳಲ್ಲಿ ಅವರ ಉದ್ಯೋಗ ಪ್ರೊಫೈಲ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
"ಪ್ರತಿಭಟನೆ ಮಾಡಬೇಡಿ ಎಂದು ಯಾರೂ ಹೇಳಿಲ್ಲ, ಹೇಳುವುದಿಲ್ಲ. ಆದರೆ ಅದೇ ಸಮಯದಲ್ಲಿ, ನಿಮ್ಮ ಶಿಕ್ಷಣದ ಹಾದಿಯನ್ನು ರಾಜಿ ಮಾಡಿಕೊಳ್ಳುವುದು ತಪ್ಪು. ರಾಜಕೀಯದಲ್ಲಿ ತೊಡಗಿರುವ ಅನೇಕ ವಿದ್ಯಾರ್ಥಿಗಳು ತದನಂತರ ನನ್ನ ಬಳಿ ಬಂದು ಪರಾದಾಡುತ್ತಾರೆ. ಇದು ಮುಂದೆ ಅವರು ಉದ್ಯೋಗಕ್ಕೆ ಎಂದು ಹೊರಗೆ ಹೋದಾಗ ಪರಿಣಾಮ ಬೀರುತ್ತದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).