BBKS10: ಫಿನಾಲೆ ಹಂತದಲ್ಲಿ ಸಂತು-ಪಂತು; ನಿರೀಕ್ಷೆ ತಲೆಕಳಗೆ ಮಾಡಿದ ಸಂತೋಷ್​ ಎಲಿಮಿನೇಷನ್​?

ವಿಜಯವಾಣಿ - 2024-01-14T132244.474
Published on

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 14ನೇ ವಾರಾಂತ್ಯವನ್ನು ತಲುಪಿದ್ದು, ಫಿನಾಲೆಗೆ ಟಿಕೆಟ್ ಪಡೆಯುವ ಮೂಲಕ ಫೈನಲ್​ ಪ್ರವೇಶಿಸಿದ ಮೊದಲ ಸ್ಪರ್ಧಿಯಾದ ಸಂಗೀತಾ ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಅಂತಿಮ ಘಟ್ಟವನ್ನು ತಲುಪಲು ಭಾರೀ ನಿರೀಕ್ಷೆಯಿಂದ ಎದುರುನೋಡುತ್ತಿದ್ದಾರೆ. ಆದ್ರೆ, ಈ ವಾರ ಮನೆಯಿಂದ ಒಬ್ಬ ಸ್ಪರ್ಧಿ ಎಂದಿನಂತೆ ಎಲಿಮಿನೇಟ್​ ಆಗಿ ಹೊರಬರಲೇಬೇಕು. ಈ ಪ್ರಕ್ರಿಯೆಯಲ್ಲಿ ಮನೆಯ ಹಾಗೂ ವೀಕ್ಷಕರ ಅಚ್ಚುಮೆಚ್ಚಿನ ಜೋಡಿಯಾದ 'ಸಂತು-ಪಂತು' ಕಡೆಯದಾಗಿ ಉಳಿದುಕೊಂಡಿದ್ದು, ಅನೇಕರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಎಲಿಮಿನೇಟ್ ಆಗಿ ಹೊರಬರುವ ಪ್ರಕ್ರಿಯೆಯಲ್ಲಿ ಮುಂಚಿತವಾಗಿಯೇ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್​, ಆ ಹಾಟ್​ ಸೀಟ್​ನಲ್ಲಿ ನಾವಿಬ್ಬರು ಕುಳಿತ್ತಿರುತ್ತೇವೆ ಎಂದು ಬಲವಾಗಿ ನಿರೀಕ್ಷಿಸಿದ್ದರು ಅನಿಸುತ್ತದೆ ಎಂದು ವೀಕ್ಷಕರು ಅಭಿಪ್ರಾಯಿಸಿದ್ದಾರೆ. ಅದರಂತೆಯೇ 'ಸೂಪರ್ ಸಂಡೆ ವಿತ್ ಸುದೀಪ' ಸಂಚಿಕೆಗೆ ಸಾಗಿದ ಸಂತು-ಪಂತು ಜೋಡಿ, ತಮ್ಮಿಬ್ಬರಲ್ಲಿ ಯಾರೇ ಎಲಿಮಿನೇಟ್ ಆದರು ತುಂಬ ನೋವಾಗುತ್ತದೆ. ವರ್ತೂರು ಫೈನಲ್​ಗೆ ಹೋಗಿ ಗೆದ್ದು ಬರಬೇಕು ಎಂಬುದು ನನ್ನ ಆಶಯ ಎಂದು ತುಕಾಲಿ ಸಂತೋಷ್ ಕಣ್ಣೀರಾಕುತ್ತ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ವರ್ತೂರು ಕೂಡ ಭಾವುಕರಾಗಿ, ಸಂತೋಷ್ ಅಣ್ಣ ಫಿನಾಲೆಗೆ ಹೋಗಿ ಗೆದ್ದು ಬರಬೇಕು ಎಂಬುದೇ ನನ್ನ ಆಸೆ ಕೂಡ ಎಂದು ಮನಸ್ಸಿನಿಂದ ಹರಸಿದ್ದಾರೆ. ಈ ಇಬ್ಬರ ಜೋಡಿಯನ್ನು ಕಂಡು ಕಂಬನಿ ಮಿಡಿದ ಮನೆಮಂದಿಗೆ ಧೈರ್ಯದ ಮಾತುಗಳನ್ನು ಹೇಳಿದ ಸುದೀಪ್, ಸಂತು-ಪಂತು ಸ್ನೇಹವನ್ನು ಮೆಚ್ಚಿ ಮಾತನಾಡಿದರು.

ಇದಾದ ಬಳಿಕ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗಬೇಕು ಎಂಬ ಪ್ರಕ್ರಿಯೆಯಲ್ಲಿ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್​ ಪರಸ್ಪರ ಶುಭಹಾರೈಸಿ ಸುದೀಪ್ ಅವರ ಮಾತಿಗೆ ಕಾಯುತ್ತಿದ್ದರು. ಈ ವೇಳೆ ಶಾಕ್ ನೀಡಿದ ಸುದೀಪ್, ಈ ವಾರ ನೋ ನಾಮಿನೇಷನ್​ ವೀಕ್ ಎಂದು ಹೇಳುವ ಮೂಲಕ ಸದ್ಯ ಇಬ್ಬರಿಗೂ ಬಿಗ್ ರಿಲೀಫ್​ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net